ಲೋಕಲ್ ಸಮಸ್ಯೆಗೆ 1 ಒತ್ತಿ, ಅಂತರಾಷ್ಟ್ರೀಯ ಸಮಸ್ಯೆಗೆ ಎರಡು ಒತ್ತಿ : ಯೋಗಿ ಆದಿತ್ಯನಾಥ ಪೋಟೋ ಟ್ರೆಂಡ್..!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪೋಟೋ ಒಂದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಬ್ರಹ್ಮೋಸ್ ಕ್ಷಿಪಣಿ ( BRAHMOS ) ಜೊತೆ ಸಿಎಂ ಯೋಗಿ ಆದಿತ್ಯನಾಥ ಅವರು ಪೋಸ್ ಕೊಟ್ಟ ಪೋಟೋ ಸಧ್ಯ ಟ್ರೆಂಡ್ ನಲ್ಲಿದೆ.
ಹೌದು ಮೊನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ದೇಶಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಯಿಂದಲೇ ಭಾರತ ದಾಳಿ ನಡೆಸಿತ್ತು. ಭಾರತದ ನಿಖರ ದಾಳಿಗೆ ಕಂಗಾಲಾಗಿದ್ದ ಪಾಕಿಸ್ತಾನಕ್ಕೆ ಇದನ್ನು ತಡೆಯಲು ಅವರ ಚೀನಾ ನಿರ್ಮಿತ ಏರ್ ಡಿಫೆನ್ಸ್ ಗೂ ಸಾಧ್ಯವಾಗಿರಲಿಲ್ಲ.
ಸಧ್ಯ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಜಗತ್ತಿನಾದ್ಯಂತ ರಾಷ್ಟ್ರಗಳು ಮುಂದೆ ಬಂದಿವೆ. ಈ ಸಂದರ್ಭದಲ್ಲಿ ಚೀನಾ ದೇಶದ ರಕ್ಷಣಾ ಸಾಮಗ್ರಿಗಳು ಜಗತ್ತಿನ ಮುಂದೆ ಬೆತ್ತಲಾಗಿವೆ. ಬ್ರಹ್ಮೋಸ್ ಕ್ಷಿಪಣಿ ತಯಾರಿಕೆಗಾಗಿ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯದ ಉದ್ಘಾಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.
ಬ್ರಹ್ಮೋಸ್ ಕ್ಷಿಪಣಿ ಜೊತೆ ಯೋಗಿ ಆದಿತ್ಯನಾಥ ಅವರು ನಿಂತ ಪೋಟೋ ಹಾಗೂ ಈ ಹಿಂದೆ ಯುಪಿ ನೆಲದಲ್ಲಿ ಸಮಾಜಘಾತುಕ ಕೆಲಸ ಮಾಡುವವರ ವಿರುದ್ಧ ಜೆಸಿಬಿ ಮೂಲಕ ಸಮರ ಸಾರುತ್ತಿದ್ದ ಪೋಟೋ ಜೋಡಿಸಿ. ಲೋಕಲ್ ಸಮಸ್ಯೆಗೆ 1 ಒತ್ತಿ, ಅಂತರಾಷ್ಟ್ರೀಯ ಸಮಸ್ಯೆಗೆ ಎರಡು ಒತ್ತಿ ಎಂಬುದು ಟ್ರೆಂಡ್ ಆಗಿದೆ.

