ಬಿಜೆಪಿ ಸೇರಲು ಮುಂದಾದ ಡಿಕೆಶಿ ; ಸ್ಪೋಟಕ ಹೇಳಿಕೆ ಕೊಟ್ಟ ಯತ್ನಾಳ್…!
ಕಲಬುರಗಿ : ಡಿಸಿಎಂ ಡಿಕೆಶಿ ಈಗಾಗಲೇ ಒಂದು ಹೆಜ್ಜೆ ಹೊರಗೆ ಇಟ್ಟಿದ್ದು ಬಿಜೆಪಿ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದರು. ಈ ಕುರಿತು ವಿಜಯೇಂದ್ರ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಸ್ಪೋಟಕ ಹೇಳಿಕೆ ಹೇಳಿದ್ದಾರೆ.
ಒಪ್ಪಂದದ ಪ್ರಕಾರ ಡಿಕೆಶಿ ಸಿಎಂ ಹುದ್ದೆ ಅಲಂಕರಿಸಿದರೆ ವಿಜಯೇಂದ್ರ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದರು. ಆದರೆ ಡಿಕೆಶಿ ಹಿಂದೆ ಶಾಸಕರ ಸಂಖ್ಯೆ ಕಡಿಮೆಇರುವ ಹಿನ್ನಲೆಯಲ್ಲಿ ಇದು ಸಾಧ್ಯವಾಗಿಲ್ಲ ಎಂದರು.
ಡಿಕೆಶಿ ಬಿಜೆಪಿ ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಚರ್ಚೆ ನಡೆಸಿದ್ದಾರೆ. ತಮಗೆ 60 ರಿಂದ 70 ಶಾಸಕರ ಬೆಂಬಲ ಇದೆ ಎಂದು ಹೇಳಿದ್ದರು. ಆದರೆ ಇವರಿಗೆ 10 ರಿಂದ 12 ಶಾಸಕರ ಬೆಂಬಲ ಇಲ್ಲ ಎಂದರು.
ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿದ್ದರೆ ತೊಂದರೆ ಇಲ್ಲ. ಆದರೆ ಡಿಕೆ ಶಿವಕುಮಾರ್ ಅಂತ ಭ್ರಷ್ಟ ಸಿಎಂ ಹುದ್ದೆ ಅಲಂಕರಿಸಬಾರದು ಎಂದರು. ಶಿವಕುಮಾರ್ ಹಾಗೂ ವಿಜಯೇಂದ್ರ ಒಂದಾದರೆ ರಾಜ್ಯ ಮಾರಿಬಿಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.


