CRIME : ಅನ್ನದ ಆಗಳು ಗಂಟಲಲ್ಲಿ ಸಿಲುಕಿ 38ರ ವ್ಯಕ್ತಿ ಸಾ*ವು.!
ಉತ್ತರ ಕನ್ನಡ (Uttar Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಬಿಣಗಾದಲ್ಲಿ ಘೋರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬರು ಊಟ ಮಾಡುವ (Crime) ವೇಳೆ ಅನ್ನದ ಆಗಳು ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಾಳಸವಾಡ ನಿವಾಸಿ ಅಮಿತ್ ಮಾಳಸೇರ್ (38) ಎಂದು ಗುರುತಿಸಲಾಗಿದೆ. ಕೆಲ ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಿತ್ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಬಹಳ ಸುಸ್ತಾಗಿದ್ದರು.
ಅಲ್ಲದೇ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿತ್ತು. ಎಂದಿನಂತೆ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಅನ್ನದ ಆಗಳು ಗಂಟಲಲ್ಲಿ ಸಿಲುಕಿದೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಅಮಿತ್ ಗೆ ನೀರು ಕುಡಿಸಿದ್ದಾರೆ.
ಅನ್ನದ ಆಗಳು ಗಂಟಲಲ್ಲಿ ಸಿಲುಕುತ್ತಿದ್ದಂತೆ ಅಮಿತ್ ಜೋರಾಗಿ ಕೆಮ್ಮಿದ್ದಾರೆ. ಆದರೂ ಕೂಡ ಆಗಳು ಗಂಟಲಲ್ಲೇ ಸಿಲುಕಿದೆ. ಕೂಡಲೇ ಮನೆಯವರು ನೀರು ಕುಡಿಸಿದರೂ ಕೂಡ ಪ್ರಯೋಜನವಾಗಿಲ್ಲ, ಪರಿಣಾಮ ಅಮಿತ್ ಅಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಅಮಿತ್ ರನ್ನು ಆಂಬುಲೆನ್ಸ್ ಮೂಲಕ ಕಾರವಾರದ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಘಟನೆ.. ಗಂಟಲಲ್ಲಿ ಕಪ್ ಕೇಕ್ ಸಿಲುಕಿಕೊಂಡು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರುನಲ್ಲಿ ನಡೆದಿದೆ.
ಮೃತ ದುರ್ದೈವಿ ಮಹಿಳೆಯನ್ನು ಜೈನಬಾ (44) ಎಂದು ಗುರುತಿಸಲಾಗಿದೆ. ಇವರು ಶುಕ್ರವಾರ (ಮೇ.30) ಸಂಜೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು..?: ಮಗಳ ಮದುವೆಯ ಸಂಭ್ರಮದ ಹಿನ್ನೆಲೆಯಲ್ಲಿ ಜೈನಬಾ ಅವರ ಮನೆಯಲ್ಲಿ ಕೇಕ್ ಕಟ್ ಮಾಡಲಾಗಿತ್ತು. ರಾತ್ರಿ ತಿಂದು ಉಳಿದಿದ್ದ ಕಪ್ ಕೇಕ್ ಅನ್ನು ಮನೆಯಲ್ಲಿ ಇಡಲಾಗಿತ್ತು. ಬಳಿಕ ಮೇ 29 ರ ಸಂಜೆ ಜೈನಬಾ ಅವರು ಚಹಾ ಕುಡಿಯುತ್ತಿದ್ದ ವೇಳೆ ಬಾಕಿ ಉಳಿದಿದ್ದ ಕಪ್ ಕೇಕ್ ಸೇವಿಸಿದ್ದಾರೆ.
ಆದರೆ ಇದು ಜೈನಬಾ ಅವರ ಗಂಟಲಲ್ಲಿ ಸಿಲುಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಕೊಟ್ಟಕ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದರೆ ಶುಕ್ರವಾರ ಸಂಜೆ ಚಿಕಿತ್ಸೆ ಫಲಿಸದೇ ಜೈನಬಾ ಮೃತಪಟ್ಟಿದ್ದಾರೆ. ತಾಯಿ ನಿಧನದಿಂದಾಗಿ ಶನಿವಾರ (ಮೇ 31) ನಡೆಯಬೇಕಿದ್ದ ನಿಖಾ ಶಾಸ್ತ್ರವನ್ನು ಕೆಲವೇ ಕೆಲ ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಉಳಿದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

