ನದಿ ಹಾರಿದ ಬಸವಣ್ಣ ಹೇಳಿಕೆ ; ಯತ್ನಾಳ್ ವಿರುದ್ಧ ಲಿಂಗಾಯತ ಸಂಘಟನೆ ಆಕ್ರೋಶ
ಕೊಪ್ಪಳ : ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವದಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಗಂಗಾವತಿ ಬಸ್ ನಿಲ್ದಾಣ ಪಕ್ಕದಲ್ಲಿ ಬಸವನಗೌಡ ಪಾಟೀಲ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು.
ಬೀದರ್ ನಲ್ಲಿ ನಡೆದ ವಕ್ಫ್ ವಕ್ಪ್ ವಿರುದ್ಧದ ಪ್ರತಿಭಟನೆಯಲ್ಲಿ ಹಿಂದೂಗಳು ಈ ಕರಾಳ ಕಾನೂನಿನ ವಿರುದ್ಧ ಮನೆಯಿಂದ ಹಿರಬಂದು ಮಾತನಾಡಬೇಕು. ಇಲ್ಲವಾದರೆ ಬಸವಣ್ಣನಂತೆ ನದಿ ಜಿಗಿಯಬೇಕು ಅಥವಾ ಮತಾಂತರ ಆಗುವುದು ಒಂದೇ ದಾರಿ ಎಂದು ಹೇಳಿಕೆ ನೀಡಿದ್ದರು.
ಬಸವೇಶ್ವರರ ವಿರುದ್ಧ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇವರ ಹೇಳಿಕೆಯಿಂದ ಅಸಂಖ್ಯಾತ ಲಿಂಗಾಯತರಿಗೆ ನೋವು ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ದಿಲೀಪ್ ಕುಮಾರ್, ವಿರೇಶ್ ಅಸರೆಡ್ಡಿ, ಕೆ. ವೀರೇಶಪ್ಪ, ಹೆಚ್ ಮಲ್ಲಿಕಾರ್ಜುನ ಸೇರಿ ಅನೇಕರು ಉಪಸ್ಥಿತರಿದ್ದರು.

