
ಕೂಲಿ ಮಾಡುತ್ತಿದ್ದವರ ಮಗನಿಗೆ 7 ಚಿನ್ನದ ಪದಕ ; ತಾಯಿ ಇಲ್ಲದ ಹುಡುಗನಿಗೆ ತಂದೆಯೇ ಜೀವ

ಬೆಳಗಾವಿ : ನೇಕಾರ ವೃತ್ತಿಯನ್ನೇ ನಂಬಿ ತಮ್ಮ ಮೂವರು ಮಕ್ಕಳ ವಿಧ್ಯಾಭ್ಯಾಸ ನೋಡಿಕೊಳ್ಳುತ್ತಿರುವ ಬೆಂಗಳೂರಿನ ಲೋಕೇಶ್ ತಮ್ಮ ಮಗನ ಸಾಧನೆ ಕಂಡು ಪುಳಕಿತರಾದರು. ತಾಯಿಯ ಕೊರತೆ ಇಲ್ಲದಂತೆ ಸಾಕಿದ್ದ ಲೋಕೇಶ್ ಪುತ್ರ ಈಗ ಚಿನ್ನದ ಹುಡುಗ.
ಹೌದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಗುರುವಾರ ಜರುಗಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಎಸ್.ಜೆ.ಬಿ. ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮೋಹನಕುಮಾರ ಎಲ್. ಬರೊಬ್ಬರಿ 7 ಚಿನ್ನದ ಪದಕ ಪಡೆದುಕೊಂಡರು.
ಬಡತನ ಇದ್ದರೂ ಯುವಕನ ತಂದೆ ಲೋಕೇಶ್ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಬೆಳೆಸಿದ್ದಾರೆ. ಜೊತೆಗೆ ತಾಯಿ ಇಲ್ಲದಿದ್ದರು ಮಕ್ಕಳಿಗೆ ಕೊರತೆ ಆಗದಂತೆ ನೋಡಿಕೊಂಡ ತಂದೆ ಇಂದು ಸಮರ್ಥಕತೆಯಿಂದ ಮಗನ ಸಾಧನೆ ಕಂಡು ಆನಂದಿಸುತ್ತಿದ್ದರು.
ಮೋಹನಕುಮಾರ ತಂದೆ ಲೋಕೇಶ ವೃತ್ತಿಯಲ್ಲಿ ಕೂಲಿ ನೇಕಾರ ಇವರಿಗೆ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ. ಕೂಲಿ ಮಾಡಿ ಮೂವರು ಮಕ್ಕಳಿಗೂ ಒಳ್ಳೆಯ ಶಿಕ್ಷಣ ನೀಡಿದ್ದಾರೆ. ಈಗ ಮಗ 7 ಚಿನ್ನದ ಪದಕ ಪಡೆದ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.