ತಂಡ ಸಂಕಷ್ಟದಲ್ಲಿದ್ದಾಗ ಕೆ.ಎಲ್ ರಾಹುಲ್ ಗೆ ಕಿಂಗ್ ಕೊಹ್ಲಿ ಕೊಟ್ಟ ಸಲಹೆ ಏನು…?
ಐಸಿಸಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗಿದ್ದು ಭಾರತ ಮೊದಲ ಪಂದ್ಯ ಗೆಲ್ಲುವ ಮೂಲಕ ಶುಭ ಆರಂಭ ಪಡೆದುಕೊಂಡಿದೆ. ಆಸ್ಟ್ರೇಲಿಯಾ ಜೊತೆ ಭಾನುವಾರದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಆರಂಭಿಕ ಅಘಾತದ ನಂತರವು ವಿರಾಟ್ ಕೊಹ್ಲಿ ( Virath kohli ). ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ( K L Rahul ) ಜೊತೆಯಾಟ ಭರ್ಜರಿ ಗೆಲುವು ತಂದುಕೊಟ್ಟಿದೆ.
ಆಸ್ಟ್ರೇಲಿಯಾ ತಂಡ ನೀಡಿದ್ದ 199 ರನ್ ಗಳ ಸುಲಭ ಮೊತ್ತ ಬೆನ್ನಟ್ಟಿದ ಭಾರತ ಆರಂಭಿಕ ಅಘಾತ ಅನುಭವಿಸಿತು. ರೋಹಿತ್ ಶರ್ಮಾ, ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಕಳೆದುಕೊಂಡಿತು.
ಸಂದಿಗ್ಧ ಪರಿಸ್ಥಿತಿಯಲ್ಲಿ ಮೈದಾನದಲ್ಲಿದ್ದ ವಿರಾಟ್ ಹಾಗೂ ರಾಹುಲ್ ಉತ್ತಮ ಪ್ರದರ್ಶನ ತೋರಿದರು. ಈ ಸಂದರ್ಭದಲ್ಲಿ ಕೆ.ಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ನೀಡಿದ ಸಲಹೆ ಕುರಿತು ಸ್ವತಃ ರಾಹುಲ್ ಹೇಳಿಕೊಂಡಿದ್ದಾರೆ.
ರಾಹುಲ್ ಗೆ ವಿರಾಟ್ ಟೆಸ್ಟ್ ಆಟದಂತೆ ಆಡು ಎಂಬ ಸಲಹೆ ಕೊಟ್ಟಿದ್ದರಂತೆ. ಇದೇ ಕಾರಣಕ್ಕೆ ಕೆ.ಎಲ್ ರಾಹುಲ್ ನಿಧಾನವಾಗಿ ಆಟವಾಡುವ ಮೂಲಕ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವನ್ನು ಕಾಡುತ್ತಾ 97 ರನ್ ಪೂರೈಸಿದರು. ಕೊಹ್ಲಿ ಹಾಗೂ ರಾಹುಲ್ ಆಟದಿಂದ ಭಾರತ ಸೋಲಿನ ದವಡೆಯಿಂದ ಪಾರಾಯಿತು.


