
ದಿ. ಉಮೇಶ್ ಕತ್ತಿ ಕಂಚಿನ ಪ್ರತಿಮೆ ಅನಾವರಣ ; ಜೊತೆಗಿರುವ ಜೀವ ಯಾವತ್ತೂ ಜೀವಂತ..!

ಹುಕ್ಕೇರಿ: ಸಮಾಜಿಕ, ಸಮಾನತೆ, ನಿಜವಾದ ಅಭಿವೃದ್ದಿ ಹರಿಹಾರ ದಿ, ಉಮೇಶ ಕತ್ತಿ ಅವರು ಸತ್ಯ ಮತ್ತು ನ್ಯಾಯಮಾರ್ಗದ ಆದ್ಯತೆ ನೀಡಿ ಎಲ್ಲ ಸಮೂದಾದವರು ನನ್ನವರು ಎಂಬ ಮನೋಭಾವನೆಯುಳ್ಳ ವ್ಯೆಕ್ತಿಯಾದ ದಿ. ಉಮೇಶ ಕತ್ತಿ ಅವರು ನೆನೆಪು ಜನರಲ್ಲಿ ಅಜಾರಮರವಾಗಿ ಉಳಿತಯುತ್ತದೆ ಎಂದು ವಿರಕ್ತಮಠದ ಶಿವಾನಂದ ಸ್ವಾಮಿಜಿ ಹೇಳಿದರು.
ತಾಲೂಕಿನ ಬೆಲ್ಲದಬಾಗೇವಾಡಿ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ದಿ, ಉಮೇಶ ಕತ್ತಿ ಅವರ ಕಂಚಿನ ಪ್ರತಿಮೆ ಅನಾವರನ ಸಮಾರಂಭದಲ್ಲಿ ಮಾತನಾಡಿದರು.
ನಾವು ಸಮಾಜದ ಒಂದು ಭಾಗ ಎಂದು ಭಾವನೆ ಮೂಡಿದಲ್ಲಿ ನಾವು ಜನಮನದಲ್ಲಿ ಉಳಿಯಲು ಸಾಧ್ಯವಾಗುತ್ತಿದೆ.
ರಾಜಕೀಯ ಹೊರತುಪಡಿಸಿ ಎಲ್ಲ ಸಮಾಜದವರಿಗೆ ಪ್ರತಿಗೆ ಪಾತ್ರರಾಗಿ ಜನಸೇವೆ ಸಲ್ಲಿಸಿದ ಹಿರಿಯ ರಾಜಕಾರಣಿ ಉಮೇಶ ಕತ್ತಿ ಅವರು ಇಂದಿನ ಯವಕರಿಗೆ ಮಾದರಿ ಆಗಿದ್ದಾರೆ ಎಂದರು.
ಶಾಸಕ ನಿಖಿಲ ಕತ್ತಿ ಮಾತನಾಡಿ ನಮ್ಮ ತಂದೆಯವರು ಹಾಕಿಕೊಟ್ಟು ಆದರ್ಶ ಮಾರ್ಗವೇ ನಮ್ಮಲ್ಲರಿಗೂ ದಾರಿದೀಪವಾಗಿದೆ. ಅವರು ತತ್ವ ಆದರ್ಶದ ಆದರದಮೇಲೆ ಜನಸೇವೆ ಮಾಡಲು ಅನೂಕೂಲವಾಗಿದೆ ಎಂದರು.
ಉದ್ಯಮಿ, ಪೃತ್ವಿ ಕತ್ತಿ, ಮಾಜಿ ಜಿ.ಪಂ, ಸದಸ್ಯ ಪವನ ಕತ್ತಿ, ಶೀಲಾ ಉಮೇಶ ಕತ್ತಿ, ಜಯಶ್ರೀ ರಮೇಶ ಕತ್ತಿ, ಶೃತಿ ನಿಖಿಲ ಕತ್ತಿ, ಸ್ನೇಹಾ ನಿತೀನದೇವ ಮುಖಂಡರಾದ ಸಿದ್ದಲಿಂಗಯ್ಯಾ ಕಡಹಟ್ಟಿ, ಅರ್,ಟಿ, ಶಿರಾಳಾಕರ,
ಸಪ್ಪಾಸಾಹೇಬ ಖೆಮಲಾಪುರೆ, ಬಸವರಾಜ ಬಂಬಲವಾಡ, ಅಶೋಕ ಬೆಲ್ಲದ, ಮುರಗೇಶ ಕತ್ತಿ, ವಿಶ್ವರಾಜ ಸಕ್ಕರೆ ಕಾರ್ಖಾನೆ ಮಲಿಕಾರ್ಜುನ ಪೂಜೇರಿ, ಸಿದ್ದು ಬಾನಿ, ಮುಖೇಶಕುಮಾರ, ಎಸ್,ಎಸ್, ಕುಲಕರ್ಣಿ, ಎಸ್.ಬಿ, ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.