
ಕಾಲು ಜಾರಿ ಬಿದ್ದ ಸಿದ್ದೇಶ್ವರ ಸ್ವಾಮೀಜಿ, ಕಾಲಿಗೆ ಗಂಭೀರ ಗಾಯ

ಚಿಕ್ಕೋಡಿ : ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಯತಪ್ಪಿ ಬಿದ್ದಿದ್ದು ಕಾಲಿಗೆ ಗಾಯವಾಗಿದೆ.
ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ಇಂದಿನಿಂದ ಆಧ್ಯಾತ್ಮಿಕ ಪ್ರವಚನ ನೀಡಲು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ವಿಜಯಪುರದಿಂದ ಆಗಮಿಸಿದ್ದರು. ಮೊದಲನೆಯ ದಿನವಾದ ಇಂದು ಹೀರೆಕೊಡಿಯ ಮಗದುಮ್ಮ ಫಾರ್ಮ್ ಹೌಸನಲ್ಲಿ ತಂಗಿದ್ದರು. ಈ ವೇಳೆ ಬಾತ್ ರೂಮ್ ಗೆ ಹೋಗಿರುವ ಸಂದರ್ಭದಲ್ಲಿ ಆಯಾತಪ್ಪಿ ಬಿದ್ದು ಕಾಲಿಗೆ ಗಾಯವಾಗಿದೆ.
ಸದ್ಯ ಕಾಲು ಜಾರಿ ಬಿದ್ದ ಸಿದ್ದೇಶ್ವರ ಸ್ವಾಮೀಜಿಗಳನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿಮಠದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತ ಶ್ರೀಗಳಿಗೆ ಕಾಲಿಗೆ ಗಾಯವಾದ ಹಿನ್ನೆಲೆ ಕೇರೂರ ಗ್ರಾಮದಲ್ಲಿ ನಡೆಯಬೇಕಿದ್ದ ಪ್ರವಚನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.