IND Vs PAK ಪಂದ್ಯದಂದು ದಾಖಲೆ ಕಾಂಡೋಮ್ ಆರ್ಡರ್ ; ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಎಂದ ಸ್ವಿಗ್ಗಿ
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಾವಳಿ ಮುಗಿದಿದ್ದು ಸಧ್ಯ ಅನೇಕ ವಿಷಯಗಳು ಹೊರಬರುತ್ತಿವೆ. ಪ್ರಮುಖ ಆಹಾರ ಸರಬರಾಜು ಮಾಡುವ ಸ್ವಿಗ್ಗಿ Swiggy ಕಂಪನಿ ಕಾಂಡೋಮ್ ಕುರಿತು ಸುದ್ದಿಯಾಗಿದೆ.
ಹೌದು ಭಾರತ ಪಾಕಿಸ್ತಾನ ಪಂಧ್ಯದ ದಿನ 3,509 ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿದೆ, ಕೆಲವು ಆಟಗಾರರು ಇಂದು ಮೈದಾನದ ಹೊರಗೆ ಆಡುತ್ತಿದ್ದಾರೆ’ ಎಂದು ಸ್ವಿಗ್ಗಿ ತಮಾಷೆಯಾಗಿ ಟ್ವೀಟ್ ಮಾಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,00,000 ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಕೇವಲ 191 ರನ್‌ಗಳಿಗೆ ಆಲೌಟ್ ಮಾಡಿತು ಮತ್ತು ನಂತರ ಏಳು ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿತು.
ಸ್ವಿಗ್ಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕ್ರಮವಾಗಿ 10,916 ಬ್ಲೂ ಲೇಸ್ (ಚಿಪ್ಸ್) ಮತ್ತು 8,504 ಗ್ರೀನ್ ಲೇಸ್ ಪ್ಯಾಕೆಟ್‌ಗಳನ್ನು ಆರ್ಡರ್ ಮಾಡಲಾಗಿದೆ. ನಿಸ್ಸಂದೇಹವಾಗಿ ಇಲ್ಲಿಯೂ ಬ್ಲೂ ಗೆಲ್ಲುತ್ತಿದೆ ಎಂದು ಕಂಪನಿ ಟ್ವೀಟ್ ಮಾಡಿದೆ.
ಪಂದ್ಯದ ಆರಂಭದಿಂದಲೂ, ಸ್ವಿಗ್ಗಿಯಲ್ಲಿ ಪ್ರತಿ ನಿಮಿಷಕ್ಕೆ 250 ಬಿರಿಯಾನಿ ಆರ್ಡರ್‌ಗಳನ್ನು ಮಾಡಲಾಗಿತ್ತಂತೆ. ಚಂಡೀಗಢದ ಕುಟುಂಬವೊಂದು ಒಂದೇ ಬಾರಿಗೆ 70 ಬಿರಿಯಾನಿ ಆರ್ಡರ್ ಮಾಡಿದೆ ಎಂದು ಕಂಪನಿ ಹೇಳಿದೆ. ಇದಲ್ಲದೇ ಪಂದ್ಯದ ವೇಳೆ ಭಾರತೀಯರು 1 ಲಕ್ಷಕ್ಕೂ ಹೆಚ್ಚು ತಂಪು ಪಾನೀಯಗಳನ್ನು ಆರ್ಡರ್ ಮಾಡಿದ್ದಾರೆ.


