ಸಿದ್ದರಾಮಯ್ಯ ಸಿಎಂ ಆಗ್ತಾರಾ? ಡಿಕೆಶಿ ಒಪ್ತಾರಾ..?
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಸಧ್ಯ ಯಾರಾಗುತ್ತಾರೆ ರಾಜ್ಯದ ಸಿಎಂ ಎಂಬ ಚರ್ಚೆ ಮೂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಹುದ್ದೆಗೆ ಸ್ಪರ್ಧೆ ನಡೆಸಿದ್ದಾರೆ. ಸಧ್ಯದ ಶಾಸಕರ ಬಲ ನೋಡಿದರೆ ಟಗರು ಸಿದ್ದರಾಮಯ್ಯ ಪರ ಒಲವು ತೋರುವ ಲಕ್ಷಣ ಇದ್ದು, ಕಾಂಗ್ರೆಸ್ ಹೈಕಮಾಂಡ್ ಗೆ ಡಿಕೆಶಿ ಮೇಲೆ ಹೆಚ್ಚಿನ ನಂಬಿಕೆ ಇದ್ದಂತೆ ಕಾಣುತ್ತಿದೆ. ಆದರೆ ಶಾಸಕರ ಅಭಿಪ್ರಾಯಕ್ಕೆ ಮಣಿದು ಸಿದ್ದರಾಮಯ್ಯ ಸಿಎಂ ಹುದ್ದೆಗೆ ಏರಲು ಡಿಕೆಶಿ ಒಪ್ಪುತ್ತಾರಾ ಎಂಬ ಮಾತು ಕೇಳಿಬರುತ್ತಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಡಿ.ಕೆ ಶಿವಕುಮಾರ್ ರಾಜ್ಯಾದ್ಯಂತ ಸುತಾಡಿ ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಿದರು. ಬಿಜೆಪಿ ಹಾಗೂ ಜೆಡಿಎಸ್ ನಾಯರನ್ನು ಸೆಳೆದು ಕಾಂಗ್ರೆಸ್ ಅಧಿಕಾರಕ್ಕೆರಲು ಪ್ರಯತ್ನ ಪಟ್ಟರು. ಈ ಎಲ್ಲಾ ಕಾರಣಗಳಿಂದ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ ಶಿವಕುಮಾರ್ ಮೇಲೆ ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮದೇ ವೈಯಕ್ತಿಕ ವರ್ಚಸ್ಸು ಹಾಗೂ ಅಹಿಂತ ನಾಯಕತ್ವದ ಅಡಿಯಲ್ಲಿ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೆ ಕುರುಬ ಮತ್ತು ಅಹಿಂದ ವರ್ಗವನ್ನು ಕಾಂಗ್ರೆಸ್ ನತ್ತ ಸೆಳೆಯಲು ಯಶಸ್ವಿಯಾಗಿದ್ದು ಕಾಂಗ್ರೆಸ್ಸಿನ ಅನೇಕ ಶಾಸಕರ ಬೆಂಬಲವೂ ಇವರ ಬೆನ್ನಿಗಿದೆ. ಈ ಎಲ್ಲಾ ಕಾರಣಗಳಿಂದ ಸಿದ್ದು ಸಿಎಂ ಆಗುತ್ತಾರಾ ಎಂದು ಕಾದು ಮೋಡಬೇಕು.
ಇನ್ನೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸುವುದು ಅನುಮಾನ. ರಾಜ್ಯದಲ್ಲಿ ಅಹಿಂತ ನಾಯಕರಾದ ಸಿದ್ದರಾಮಯ್ಯ ಅವರ ಬೆಳವಣಿಗೆಗಿಂದ ತಮ್ಮ ಶಿಷ್ಯ ಡಿಕೆಶಿ ಪರವಾಗಿ ಕಾಂಗ್ರೆಸ್ ನಾಯಕರ ಮುಂದೆ ಬ್ಯಾಟ್ ಬೀಸಬಹುದು. ಈ ಕಾರಣಕ್ಕೆ ಕಾಂಗ್ರೆಸ್ ಸಿಎಂ ಯಾರಾಗುತ್ತಾರೆ ಎಂಬ ಗೊಂದಲ ಜನರಲ್ಲಿ ಇದ್ದಿದ್ದು ಸುಳ್ಳಲ್ಲ.


