ಸತೀಶಣ್ಣ ಆದಷ್ಟು ಬೇಗ ಸಿಎಂ ಆಗಲಿ ; ಜಾರಕಿಹೊಳಿ ಪರ ಜೆಡಿಎಸ್ ಶಾಸಕ ಬ್ಯಾಟಿಂಗ್
ಯಾದಗಿರಿ : ಸಧ್ಯ ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಜೋರಾಗತೊಡಗಿದೆ. ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಹುದ್ದೆ ಕನಸು ಕಾಣುತ್ತಿದ್ದರೆ ಇತ್ತ ಸತೀಶ್ ಜಾರಕಿಹೊಳಿ ಸಿಎಂ ಹುದ್ದೆ ಅಲಂಕರಿಸಲಿ ಎಂದು ಜೆಡಿಎಸ್ ಶಾಸಕ ಒತ್ತಾಯ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಕ್ಷೇತ್ರದ ಜೆಡಿಎಸ್ ಶಾಸಕ
ಶರಣಗೌಡ ಕಂದಕೂರ ಅಚ್ಚರಿ ಹೇಳಿಕೆ ಮೂಲಕ ಗಮನಸೆಳೆ ದಿದ್ದಾರೆ. ಸತೀಶ್ ಅಣ್ಣ ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದವರು. ಸತೀಶಣ್ಣ ಆದಷ್ಟು ಬೇಗ ಸಿಎಂ ಆಗಲಿ ಎಂದು ಶರಣಗೌಡ ಹೇಳಿದ್ದಾರೆ.
ಸೋಮವಾರ ನಡೆದ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಶರಣಗೌಡ. ಸತೀಶ್ ಜಾರಕಿಹೊಳಿ ಸಿಎಂ ಹುದ್ದೆ ಅಲಂಕರಿಸಲಿ ಎಂದು ಆಶಿಸಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ಪರ ಜೆಡಿಎಸ್ ಶಾಸಕರು ಬ್ಯಾಟ್ ಬೀಸಿದ್ದು ಚರ್ಚೆ ಮತ್ತಷ್ಟು ಜೋರಾಗುವಂತೆ ಮಾಡಿದೆ.