
ದೆಹಲಿ ನೂತನ ಸಿಎಂ ಗೆ ಶುಭಾಶಯ ಕೋರಿದ ಶಂಕರಗೌಡ ಪಾಟೀಲ್

ದೆಹಲಿ : ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ರೇಖಾ ಗುಪ್ತಾ ಅವರನ್ನು ಸೋಮವಾರ ಭೇಟಿ ಮಾಡಿದ ಬಿಜೆಪಿ ಹಿರಿಯ ಮುಖಂಡ ಶಂಕರಗೌಡ ಪಾಟೀಲ ಅವರು ಶುಭಾಶಯ ಕೋರಿದರು.
ಅಷ್ಟೇ ಅಲ್ಲದೆ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ, ಬೆಂಗಳೂರು ಬೆಳಗಾವಿ ನಡುವೆ ಶೀಘ್ರದಲ್ಲಿ ವಂದೇ ಭಾರತ ರೈಲು ಪ್ರಾರಂಭಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾಜಸೇವಕ ಮದನ್ ಕುಮಾರ್ ಭೈರಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು