ಅಥಣಿಯಲ್ಲಿ ಸಾಲು ಸಾಲು ಗುಪ್ತ ಸಭೆಗಳು ; ಕೈ ತಪ್ಪುತ್ತಿದೆಯಾ ಸಾಹುಕಾರ್ ಲೆಕ್ಕಾಚಾರ?
ಅಥಣಿ : ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಯಾಗಿ ಸಧ್ಯ ಮತಯಾಚನೆಯಲ್ಲಿ ತೊಡಗಿದ್ದಾರೆ. ಇತ್ತ ಮಹೇಶ್ ಕುಮಠಳ್ಳಿ ಬಿಜೆಪಿ ಅಭ್ಯರ್ಥಿಯಾಗಿದ್ದು ರಮೇಶ್ ಜಾರಕಿಹೊಳಿ ಬೆಂಬಲದಿಂದ ಸಾಗುತ್ತಿದ್ದಾರೆ. ಈ ಮದ್ಯೆ ಸಾಲು ಸಾಲು ಸಭೆಗಳು ನಡೆಯುತ್ತಿದ್ದು ಚುನಾವಣಾ ಸಮೀಕರಣ ಬದಲಾಗುತ್ತಿದೆ.
ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಲಕ್ಷ್ಮಣ ಸವದಿ ಈಗಾಗಲೇ ಬೃಹತ್ ಜನಸಮೂಹದ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದು ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಜೊತೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅವರ ಬೆನ್ನಿಗೆ ತೋರ್ಪಡಿಕೆಗೆ ನಿಂತಿದ್ದು ಸವದಿ ಹಳೇ ತಂಡ ಚುನಾವಣೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದೆ. ಆದರೆ ಹಳೆಯ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಇತ್ತ ಸವದಿ ಬೆಂಬಲಿಸಬೇಕಾ ಬೇಡವಾ? ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಇನ್ನೂ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ರಮೇಶ್ ಜಾರಕಿಹೊಳಿ ಮೇಲೆ ಅವಲಂಬನೆ ಆಗಿದ್ದು ಮೇಲ್ಮಟ್ಟದಲ್ಲಿ ಕಂಡರು ಒಳಗಿನ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಇದ್ದ ಕಾಂಗ್ರೆಸ್ ಆಪ್ತ ವಲಯದವರನ್ನು ತಮ್ಮತ್ತ ಸೆಳೆಯುವ ಕಸರತ್ತು ಮುಂದುವರಿಸಿದ್ದಾರೆ. ಇವೆಲ್ಲದರ ಬೆನ್ನಲ್ಲೇ ಈಗ ಅಥಣಿಯಲ್ಲಿ ಅಸಲಿ ಆಟಗಳು ನಡೆಯುತ್ತಿವೆ. ರಾತ್ರಿಯಿಡೀ ಜಂಟಿ ಕಾರ್ಯಾಚರಣೆಯಿಂದ ರಾಜಕೀಯ ಸಮೀಕರಣ ಬಲಾಗುತ್ತಿವೆ.
ಬಿಜೆಪಿ ಮೋದಿ ಅಸ್ತ್ರ : ಈಗಾಗಲೇ ಲಕ್ಷ್ಮಣ ಸವದಿ ಹುಮ್ಮಸ್ಸಿನಿಂದ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದು ಇದನ್ನು ತಡೆಯಲು ಬಿಜೆಪಿ ಮೋದಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಥಣಿ ವಲಯದಲ್ಲಿ ಕರೆತರುವ ಕಸರತ್ತು ನಡೆದಿದ್ದು ಇದಕ್ಕೆ ಆರ್ ಎಸ್ ಎಸ್ ಕೂಡಾ ಮುತುವರ್ಜಿ ವಹಿಸಿದೆ. ಒಂದುವೇಳೆ ನರೇಂದ್ರ ಮೋದಿ ಅಥಣಿಗೆ ಬಂದರೆ ಜನರ ಆಲೋಚನೆ ಬದಲಾಗುವ ಸಾಧ್ಯತೆ ದಟ್ಟವಾಗಿದೆ.
ಸಾಲು ಸಾಲು ಗುಪ್ತ ಸಭೆಗಳು : ರಮೇಶ್ ಜಾರಕಿಹೊಳಿ ಈ ಬಾರಿ ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಹಠ ಹಿಡಿದಿದ್ದು ಅಥಣಿಯಲ್ಲಿ ಸಾಲು ಸಾಲು ಸಭೆ ಮಾಡುತ್ತಿದ್ದಾರೆ. ಪ್ರಮುಖ ಮುಖಂಡರನ್ನು ಕರೆದು ಮಾತನಾಡಿಸುವ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡುತ್ತಿದ್ದಾರೆ. ಈ ಬಾರಿ ಲಕ್ಷ್ಮಣ ಸವದಿ ಅಂದುಕೊಳ್ಳುವುದಕ್ಕಿಂತಲೂ ಹೆಚ್ಚು ಉತ್ಸುಕತೆ ರಮೇಶ ಜಾರಕಿಹೊಳಿ ತೋರಿಸುತ್ತಿದ್ದು ಸಮೀಕರಣ ಬದಲಾಗುವತ್ತ ಸಾಗಿದೆ.
ಕೈ ತಪ್ಪುತ್ತಿದೆಯಾ ಸಾಹುಕಾರ್ ಲೆಕ್ಕಾಚಾರ? : ಹೌದು ಗೋಕಾಕ್ ಸಾಹುಕಾರ್ ಮಾಡುವ ರಣತಂತ್ರದಿಂದ ಅಥಣಿಯಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೂ ಬಿಜೆಪಿ ಕಡೆ ವಾಲುವ ಲಕ್ಷಣ ಸದ್ಯಕ್ಕೆ ಕಂಡುಬರದಿದ್ದರು. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಬಹುದು ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಒಂದುವೇಳೆ ರಮೇಶ್ ಜಾರಕಿಹೊಳಿ ಅಬ್ಬರ ಮುಂದುವರಿದರೆ ಅಥಣಿಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸಿದರು ಅಚ್ಚರಿ ಇಲ್ಲ.
ಹಠ ಬಿಡದ ಸವದಿ : ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಲಕ್ಷಣ ಸವದಿ ಕೂಡಾ ಶತಾಯ ಗತಾಯ ಗೆಲ್ಲುವ ಲೆಕ್ಕಾಚಾರ ಹೊಂದಿದ್ದು ಕ್ಷೇತ್ರದ ತುಂಬಾ ಸಂಚರಿಸುತ್ತಿದ್ದಾರೆ. ಈ ಬಾರಿ ಗೆಲ್ಲುವುದು ಅನಿವಾರ್ಯ ಎಂದು ಆಪ್ತ ವಲಯದಲ್ಲಿ ಹೇಳುತ್ತಿದ್ದು ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಅಥಣಿ ಚುನಾವಣಾ ಕಣ ರಂಗು ಒಡೆದಿದ್ದು ಸುಳ್ಳಲ್ಲ.