Select Page

Advertisement

ಶಾಸಕ ಲಕ್ಷ್ಮಣ ಸವದಿ ನಡೆಗೆ ಕುಮಠಳ್ಳಿ ಆಕ್ರೋಶ ; ಪೂಜೆ ಬಿಟ್ಟು ಕಾಮಗಾರಿ ಪ್ರಾರಂಭಿಸಲು ಆಗ್ರಹ

ಶಾಸಕ ಲಕ್ಷ್ಮಣ ಸವದಿ ನಡೆಗೆ ಕುಮಠಳ್ಳಿ ಆಕ್ರೋಶ ; ಪೂಜೆ ಬಿಟ್ಟು ಕಾಮಗಾರಿ ಪ್ರಾರಂಭಿಸಲು ಆಗ್ರಹ

ಅಥಣಿ: ತಾಲೂಕಿನ  ಪೂರ್ವ ಭಾಗಕ್ಕೆ ನೀರಾವರಿ ಕಲ್ಪಿಸುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡು ಕಳೆದ ವರ್ಷ ಮಾರ್ಚ 28 ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದು, ಈಗಿನ ಶಾಸಕ ಲಕ್ಚ್ಮಣ ಸವದಿ ಈ ಯೋಜನೆಗೆ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಿದಲ್ಲಿ ಅದು ಹಕ್ಕು ಚ್ಯುತಿ ಮಾಡಿದಂತಾಗುತ್ತದೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಆರೋಪಿಸಿದರು.
  
ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ 1486.41 ಕೋಟಿ ರೂ.ಗಳ ಈ ಯೋಜನೆಗೆ ಮೊದಲನೆ ಹಂತದ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆಗಾಗಿ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಜೊತೆಗೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಾಂತ್ರಿಕ ಬಿಡ್ ನ್ನು ಕೂಡ ಅನುಮೋದಿಸಿದ್ದರು.

ಇದೆಲ್ಲ ಸರಕಾರದ ಮಟ್ಟದಲ್ಲಿಯೇ ನಡೆರುವ ವಿಷಯ ಶಾಸಕ ಲಕ್ಷ್ಮಣ ಸವದಿ ಇವರಿಗೆ ಗೊತ್ತಿದ್ದರೂ ಕೂಡ ರಾಜಕೀಯ ಕಾರಣಕ್ಕೆ ಈಗ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದ ಅವರು ಈ ಯೋಜನೆಯ ಅನುಷ್ಠಾನ ಕ್ಕೆ ಲಕ್ಷ್ಮಣ ಸವದಿಯವರೇ  ಕಾರಣವಾಗಿದ್ದು, ಇದಕ್ಕಾಗಿ ಸಾರ್ವಜನಿಕ ಚರ್ಚೆಗೆ ಸಿದ್ಧ ಎಂದರು.
      
ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸತತ ಪ್ರಯತ್ನದ ಫಲವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿಯೇ ಪ್ರಾರಂಭಗೊಂಡ ಈ ಯೋಜನೆಯ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಿ 7 ತಿಂಗಳಾಗಬೇಕಿತ್ತು ಆದರೆ ಇಲ್ಲಿಯವರೆಗೂ ಈ ಯೋಜನೆಯ ಅನುಷ್ಠಾನ ಕ್ಕೆ ಪ್ರಯತ್ನಿಸದ ಇವರು ಈಗ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸುವ ಹಕ್ಕು ಇವರಿಗಿದೆಯಾ? ಎಂದು ಪ್ರಶ್ನಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಕೂಡ ಗುತ್ತಿಗೆದಾರನಿಗೆ ವರ್ಕ ಆರ್ಡರ್ ಕೊಡಲು 7 ತಿಂಗಳ ಸಮಯ ತೆಗೆದುಕೊಂಡಿರುವ ಇವರು  ಪೂರ್ವಭಾಗದ ರೈತರಿಗೆ ಮಾಡಿರುವ ದೊಡ್ಡ ಅನ್ಯಾಯ ಎಂದರು.
    
ನಾನು ರಾಜಕೀಯ ಮಾಡುತ್ತಿಲ್ಲ ನಾನು ಅಧಿಕಾರದಲ್ಲಿ ಇರಲಿಲ್ಲ ಆದರೂ  15 ವರ್ಷಗಳಿಂದ ಈ ಯೋಜನೆ ಅನುಷ್ಠಾನ ಗೊಳಿಸಲು ಹಠ ಹಿಡಿದು ಪ್ರಯತ್ನಿಸುತ್ತಿದ್ದೇನೆ. ಆಗಿನಿಂದಲೂ ಅಧಿಕಾರದಲ್ಲಿರುವ  ಶಾಸಕ ಲಕ್ಷ್ಮಣ ಸವದಿ ಅವರು  ಈ ಯೋಜನೆಯ ಅನುಷ್ಠಾನಕ್ಕೆ ಯಾಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು.

ಮತ್ತೊಮ್ಮೆ ಶಂಕುಸ್ಥಾಪನೆ ಮಾಡುವುದನ್ನು ಕೈ ಬಿಟ್ಟು ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ನೀವೇ ಉದ್ಘಾಟಿಸಿ ಆಗ ಮಾತ್ರ ರೈತರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು. ಇಷ್ಟಾಗಿಯೂ ಒಂದು ವೇಳೆ ಈ ಯೋಜನೆಗೆ ಎರಡನೇ ಬಾರಿ ಶಂಕುಸ್ಥಾಪನೆ ಗೆ ಮುಂದಾಗಿದ್ದಲ್ಲಿ ಅನಿವಾರ್ಯವಾಗಿ ಬಿಜೆಪಿ ಘಟಕದಿಂದ ಪ್ರತಿಭಟನೆ ಮಾಡುತ್ತೇವೆ ಎಂದರು.
     
15 ವರ್ಷಗಳಿಂದ ಕಾಯುತ್ತಿರುವ ನಮ್ಮ ರೈತರು ಇನ್ನೆಷ್ಟು ದಿನ ಕಾಯಬೇಕು ಮತ್ತು ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ ಎಂದು ಉತ್ತರಿಸಿದರು. 100 ಕೋಟಿ ಮೇಲ್ಪಟ್ಟ ಟೆಂಡರ್ ಗೆ ಕನಿಷ್ಟ 28 ದಿನ ಸಮಯಾವಕಾಶ ನೀಡಬೇಕು ಎನ್ನುವ ಸರಕಾರದ ನಿಯಮ ಇದ್ದರೂ ಕೂಡ ಕೇವಲ 8 ದಿನಗಳ ಅವಕಾಶ ನೀಡಿರುವುದು ಹೇಗೆ ಸರಿ ಎನ್ನುವ ಪ್ರಶ್ನೆಗೆ ಎಲ್ಲವೂ ಸರಿಯಾಗಿದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!