Select Page

Advertisement

ಲಕ್ಷ್ಮಣ ಸವದಿ ಹೊಸ ಬಾಂಬ್ : ರಹಸ್ಯ ‌ಬಯಲು‌ ಯಾವಾಗ…?

ಲಕ್ಷ್ಮಣ ಸವದಿ ಹೊಸ ಬಾಂಬ್ : ರಹಸ್ಯ ‌ಬಯಲು‌ ಯಾವಾಗ…?

ಅಥಣಿ : ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಪೆನ್ ಡ್ರೈವ್ ಇವೆ ಎಂದು ಹೇಳುತ್ತಿದ್ದಾರೆ ನನ್ನ ಬಳಿ ಕೂಡಾ ಪೆನ್ ಡ್ರೈವ್ ಇವೆ, ಸಂದರ್ಭ ಬಂದಾಗ ತೋರಿಸುವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಇವರು. ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ.‌ ನನ್ನ ಬಳಿ‌ ಕೂಡಾ ಪೆನ್ ಡ್ರೈವ್ ಇದೆ ಸಂದರ್ಭ ಬಂದಾಗ ಬಿಡುಗಡೆ ಮಾಡುವೆ ಎಂದು ಹೇಳಿದ್ದಾರೆ. 

ಯಾರ ಭ್ರಷ್ಟಾಚಾರದ ಕುರಿತು ನಿಮ್ಮ ಬಳಿ ಸಾಕ್ಷಿ ಇದೆ ಎಂದು ಪತ್ರಕರ್ತರ ಪ್ರಶ್ನೆಗೆ ಮರು ಉತ್ತರ ನೀಡಿದ ಇವರು. ಯಾರದು ಎಂದು ನಾನು ಹೇಳುವುದಿಲ್ಲ. ನನ್ನ ಬಳಿ ಕುಡಾ ಪೆನ್ ಡ್ರೈವ್ ಇದೆ ಸೂಕ್ತ ಸಂದರ್ಭದಲ್ಲಿ ಹೊರಬಿಡುವೆ ಎಂದರು.

ರಾಹುಲ್ ಗಾಂಧಿ ಅನರ್ಹತೆ ವಾಪಸ್ಸನ್ನು ಸ್ವಾಗತಿಸಿದ ಶಾಸಕ ಲಕ್ಷ್ಮಣ ಸವದಿ, ಪ್ರಜಾಪ್ರಭುತ್ವದ ಘನತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.ಕೋರ್ಟ್ ಆದೇಶ ಹಿನ್ನೆಲೆ ಅನರ್ಹತೆ ವಾಪಸ್ ಪಡೆದ ಸ್ಪೀಕರ್ ನಡೆಯನ್ನು ನಾವು ಸ್ವಾಗತಿಸುತ್ತೇವೆ. 

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ, ಟೀಕೆ ಮಾಡಿರುವುದನ್ನು ದೊಡ್ಡ ವಿಷಯ ಮಾಡಿಕೊಂಡು ಮಾನಹಾನಿ ಕೇಸ್ ಹಾಕಲಾಗಿತ್ತು ಆದರೆ ಯಾವತ್ತೂ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ ಅದಕ್ಕೆ ಅನರ್ಹತೆಯನ್ನು ವಾಪಸ್ ಪಡೆಯಲಾಗಿದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!