Select Page

Advertisement

ಮಾತು ಬಾರದ ವಕೀಲೆಯ ನಿಶ್ಯಬ್ಧ ವಾದ ಹೇಗಿತ್ತು ಗೊತ್ತಾ…? ಅವಕಾಶ ಕೊಟ್ಟ ನ್ಯಾಯಮೂರ್ತಿ ಹಿಂದಿನ ನೋವು ಎಂತಹದು….?

ಮಾತು ಬಾರದ ವಕೀಲೆಯ ನಿಶ್ಯಬ್ಧ ವಾದ ಹೇಗಿತ್ತು ಗೊತ್ತಾ…? ಅವಕಾಶ ಕೊಟ್ಟ ನ್ಯಾಯಮೂರ್ತಿ ಹಿಂದಿನ ನೋವು ಎಂತಹದು….?

ನವದೆಹಲಿ : ಕಳೆದ ಸೋಮವಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಸಾಧನೆ ನೆರವೇರಿತು. ಇದಕ್ಕೆ ಸಾಕ್ಷಿಯಾಗಿದ್ದು ಕನ್ನಡವದರೇ ಆದ ಸಾರಾ ಸನ್ನಿ ಎಂಬುವವರು ಮೌನದಲ್ಲೇ ಕ್ರಾಂತಿ ಮಾಡುವ ಮೂಲಕ ಇಡೀ ದೇಶದ ಗಮನಸೆಳೆದರು.

ಹೌದು ವಕೀಲ ವೃತ್ತಿ ಎಂದರೆ ತಮ್ಮ ಮಾತಿನ ಚಾಣಾಕ್ಷತೆಯ ಮೂಲಕ ವಿಷಯ ಪ್ರಸ್ತುತತಪಡಿಸಿ ನ್ಯಾಯದ ಪರ ವಾದ ಮಾಡುವ ಕಾಯಕ. ಆದರೆ ಮಾತು ಬರದ ವಕೀಲರೊಬ್ಬರು ಬರೀ ಸನ್ನೆಗಳ ಮೂಲಕ ವಾದ ಮಾಡಿದ್ದು ಸಧ್ಯ ಇತಿಹಾಸ ಸೃಷ್ಟಿಯಾಗಿದೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಇದೇ ಪ್ರಕರಣ ಸಾಕ್ಷಿಯಾಗಿದೆ.

ಬೆಂಗಳೂರಿನ ಯುವ ವಕೀಲೆ ಸಾರಾ ಸನ್ನಿ ( Sara Sanni ) ಸೋಮವಾರ ಸುಪ್ರೀಂ ಕೋರ್ಟ್ ( Suprime Cort ) ನಲ್ಲಿ ಕೇವಲ ಸನ್ನೆಯಲ್ಲೇ ವಾದ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ‌. ಹರಿತ ಮಾತು, ಕಲಂಗಳ ಉಲ್ಲೇಖ, ಗಟ್ಟಿ ಧ್ವನಿಯ ವಾದ ಆಲಿಸಿದ ನ್ಯಾಯಮೂರ್ತಿಗಳಿಗೆ ಒಂದು ಕ್ಷಣ ಅಚ್ಚರಿ.

ಶ್ರವಣ – ಧ್ವನಿ ದೋಷವಿರುವ ಸಾರಾ ಸನ್ನಿ ತನ್ನ ಕಕ್ಷಿದಾರರ ಪರ ಕೈಸನ್ನೆ ಹಾಗೂ ಮುಖದ ಹಾವ ಬಾವಗಳ ಮೂಲಕ ವಾದ ಮಂಡಿಸಿದ್ದಾರೆ. ಈ ವಾದ ಆಲಿಸಿದ ಸುಪ್ರೀಂ ಕೋರ್ಟ್  ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರೇ ಒಂದು ಕ್ಷಣ ರೋಮಾಂಚನ ವ್ಯಕ್ತೊಡಿಸಿದರು‌ ಸಾರಾ ಹಾವ ಭಾವ ಹಾಗೂ ಸಂಭಾಷಣೆಯನ್ನು ಸೌರಭ್ ರಾಯ್ ಚೌಧರಿ, ವಿವರಿಸುತ್ತಾ ಹೋದರು.

ಮಾತು ಬಾರದ ಸಾರಾ ಅವರಿಗೆ ವಾದ ಮಾಡಲು ಅವಕಾಶ ಕಲ್ಪಿಸಬೇಕೆಂದು ಹಾಗೂ ಅವರ ಸನ್ನೆ ಭಾಷೆಯನ್ನು ಅನುವಾದಿಸುವ ಸಹಾಯಕರೂ ಇದ್ದಾರೆ ಎಂದು ಹಿರಿಯ ವಕೀಲೆ ಸಂಚಿತಾ ಐನ್ ಮನವಿ ಮಾಡಿಕೊಂಡರು. ತಕ್ಷಣ ಸಮ್ಮತಿ ನೀಡಿದ ನ್ಯಾಯಮೂರ್ತಿಗಳು ವಾದ ಮಂಡಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಅನುವಾದಕರು ಮಾತ್ರ ತೆರೆ ಮೇಲೆ ಕಾಣಿಸುತ್ತಿದ್ದರು. ಆದರೆ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಸಾರಾ ಅವರು ತೆರೆ ಮೇಲೆ ಕಾಣಿಸಿಕೊಳ್ಳುವಂತೆ ಸೂಚಿಸಿದರು.  ಈ ಸಂದರ್ಭದಲ್ಲಿ ಸಾರಾ ಅವರ ವಾದ ಮಂಡನೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದರು. ( #Sarasunny )

***********************************

ಅವಕಾಶ ಕೊಟ್ಟ ನ್ಯಾಯಮೂರ್ತಿ ಹಿಂದಿನ ನೋವು ಎಂತಹದು….?

ಸಾರಾ ಅವರು ವಾದ ಮಂಡನೆ ಮಾಡುತ್ತಾರೆ ಎಂದ ತಕ್ಷಣ ಮರು ಮಾತನಾಡದೆ ಅವಕಾಶ ಕಲ್ಪಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಹಿಂದೆಯೂ ಒಂದು ರೋಚಕ ಕಥೆಯಿದೆ. ಹೌದು ಈಗಾಗಲೇ ಇಬ್ಬರು ವಿಶೇಷಚೇತನ ಮಕ್ಕಳನ್ನು ದತ್ತು ತಗೆದುಕೊಂಡಿರುವ ಇವರು, ಅವರಿಗೆ ಆಸರೆಯಾಗಿದ್ದಾರೆ. ಹೆಣ್ಣು ಮಕ್ಕಳ ಮೇಲೆ ವಿಶೇಷ ಕಾಳಜಿ ಹಾಗೂ ಅಭಿಮಾನ ಹೊಂದಿರುವ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಕಷ್ಟದ ಅರಿವು ಇದೆ. ಇದೇ ಕಾರಣಕ್ಕೆ ಸಾರಾ ವಾದ ಮಂಡನೆಗೆ ಕೂಡಲೇ ಅವಕಾಶ ಕಲ್ಪಿಸಿದ್ದು ವಿಶೇಷ.

Advertisement

Leave a reply

Your email address will not be published. Required fields are marked *

error: Content is protected !!