
ಅಥಣಿಯಲ್ಲಿ ಸಾಹುಕಾರ್ ಗುಪ್ತ ಸಭೆ ಯಶಸ್ವಿ ; ಕುರುಬ ಸಮುದಾಯದ ಮುಖಂಡ ಬಿಜೆಪಿ ಸೇರ್ಪಡೆ?

ಅಥಣಿ : ಅಥಣಿ ಅಖಾಡದಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಒಂದರ ಮೇಲೆ ಒಂದರಂತೆ ಸಭೆ ನಡೆಸುತ್ತಿದ್ದ ಸಧ್ಯ ಮತ್ತೊಂದು ಸಭೆ ಯಶಸ್ವಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯದ ಮುಖಂಡ ನಿಜೆಪಿ ಸೇರ್ಪಡೆ ಖಚಿತ ಎನ್ನಲಾಗುತ್ತಿದೆ.
ಅನಿರೀಕ್ಷಿತವಾಗಿ ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಇದ್ದಿತ್ತು. ಆದರೆ ಲಕ್ಷ್ಮಣ ಸವದಿ ಅವರನ್ನು ವಿಶ್ವಾಸಕ್ಕೆ ಪಡೆದು ಭಿನ್ನಮತ ಶಮನದಲ್ಲಿ ಯಶಸ್ವಿಯಾಗಿದ್ದರು. ಆದರೆ ಕೆಲವು ಮುಖಂಡರು ಸವದಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು.
ಅಥಣಿ ಭಾಗದಲ್ಲಿ ಹಲವು ಹೋರಾಟಗಳ ಮೂಲಕ ಕಾಂಗ್ರೆಸ್ ನಲ್ಲಿ ಪ್ರಭಲವಾಗಿ ಗುರುತಿಸಿಕೊಂಡ ನಾಯಕರ ಜೊತೆ ಸಾಹುಕಾರ್ ಸಭೆ ಯಶಸ್ವಿಯಾಗಿದ್ದು ನಾಡಿದ್ದು ಪಕ್ಷ ಸೇರ್ಪಡೆ ಪಕ್ಕಾ ಎಂದು ಹೇಳಲಾಗುತ್ತಿದೆ. ಇದರಿಂದ ಲಕ್ಷ್ಮಣ ಸವದಿ ಅವರಿಗೆ ಕೊಂಚ ಹಿನ್ನಡೆ ಆಗುವುದನ್ನು ಅಲ್ಲಗಳೆಯುವಂತಿಲ್ಲ.