ಕುಂದಾನಗರಿಯಲ್ಲಿ RCB ಕ್ರೇಜ್ ; ತಂಡ ಗೆಲುವಿಗಾಗಿ ವಿಶೇಷ ಪೂಜೆ…!
ಬೆಳಗಾವಿ : ನಿರಂತರ ಹೋರಾಟದ ನಂತರ ವಿರಾಟ್ ಕೊಹ್ಲಿ ಅವರ ಆರ್ ಸಿ ಬಿ ತಂಡ ಪೈನಲ್ ತಲುಪಿದ್ದು ಕಡೆಯ ಪಂದ್ಯ ಗೆಲುವಿಗೆ ಅಭಿಮಾನಿಗಳು ದೇವರಿಗೆ ಹರಕೆ ಕಟ್ಟುತ್ತಿದ್ದಾರೆ.
ಸಧ್ಯ ಬೆಳಗಾವಿ ಆರ್ ಸಿ ಬಿ ಮಯವಾಗಿದ್ದು ತಮ್ಮ ಇಷ್ಟದ ಆಟಗಾರ ವಿರಾಟ್ ಕೊಹ್ಲಿ ಗೋಸ್ಕರ ತಂಡ ಈ ಬಾರಿ ಗೆಲ್ಲಲಿ ಎಂದು ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಶುಭ ಹಾರೈಸಿದ್ದಾರೆ.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಗೆ RCB ಗೆಲ್ಲಬೇಕು ಎಂದು ಆರ್‌ಸಿಬಿ ಸೀರೆಯನ್ನು ದೇವಿಗೆ ಹುಡಿಸಿ ಅಲಂಕರಿಸಿ ವಿಶೇಷ ಪೂಜೆ ಸಲಿಸಲಾಯಿತು ಜಗನ್ಮಾತೆ ಆರ್‌ಸಿಬಿನೊಂದಿಗೆ ಆಶೀರ್ವಾದ ಕೊಡಲಿ ಕಪ್ ಈ ಸಲ ಗೆಲ್ಲಬೇಕೆಂದು ಘೋಷಣೆ ಮುಖಾಂತರ ಅಭಿಷೇಕ ಹಾಗೂ ಪೂಜೆಯನ್ನು RCB ಅಭಿಮಾನಿಗಳು ಸಲಿಸಿದ್ದರು.
ಇನ್ನು ಬೆಳಗಾವಿ ನಗರದ ಕಪಿಲೇಶ್ವರ ದೇವಸ್ಥಾನ ಹಾಗೂ ಹನುಮಾನ್ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.


