
ತನ್ನ ಕ್ಷೇತ್ರದಲ್ಲೇ ಕಾಂಗ್ರೆಸ್ ಗೆ ಲೀಡ್ ಕೊಟ್ಟವ ನಮಗ ಹೇಳ್ತಾನ ; ಜೊಲ್ಲೆಗೆ ಹಿಗ್ಗಾಮುಗ್ಗಾ ಬೈದ ಕತ್ತಿ ಸಾಹುಕಾರ್

ಹುಕ್ಕೇರಿ : ಕಳೆದ ಲೋಕಸಭಾ ಚುನಾವಣೆ ವೇಳೆ ತನ್ನದೇ ನಿಪ್ಪಾಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 30 ಸಾವಿರ ಮತ ಲೀಡ್ ಕೊಟ್ಟ, ನಾವು ಹುಕ್ಕೇರಿಯಲ್ಲಿ ಬಿಜೆಪಿಗೆ ಹೆಚ್ಚು ಮತ ಕೊಡಿಸಿದ್ದು, ನಮ್ಮ ಬಗ್ಗೆ ಆರೋಪ ಮಾಡುತ್ತಾನೆ ಎಂದು ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ ವಾಗ್ದಾಳಿ ನಡೆಸಿದರು.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಇವರು. ಹಣದ ಸೊಕ್ಕಿನಿಂದ ಎಲ್ಲೆಡೆ ಓಡಾಟ ಮಾಡುತ್ತಿದ್ದಾನೆ. ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಮತದಾರರಿಗೆ ಸಾಲ ನೀಡುವ ಒತ್ತಡ ಹಾಕುತ್ತಿದ್ದಾನೆ. ಬ್ಯಾಂಕ್ ಯಾರಪ್ಪನ ಆಸ್ತಿ ಅಲ್ಲ ಎಂದರು.
ನಮ್ಮ ಸುದ್ದಿಗೆ ಬಂದರೆ ಬಿಡುವುದಿಲ್ಲ. ಡಿಸಿಸಿ ಬ್ಯಾಂಕ್ ಜನರದ್ದು ಯಾರೋ ಒಬ್ಬರ ಆಸ್ತಿ ಅಲ್ಲ. ಮತದಾರರಿಗೆ ದಬ್ಬಾಳಿಕೆ ಹಾಕುವ ಕೆಲಸ ಮಾಡಲಾಗುತ್ತಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.