ರಾಮದುರ್ಗ ಲಾಡ್ಜ್ ಒಂದರಲ್ಲಿ ವ್ಯಕ್ತಿ ಸಾವು
ರಾಮದುರ್ಗ : ಕಳೆದ ಹದಿನೈದು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿಯೋರ್ವ ತಾಲೂಕಿನ ಲಾಡ್ಜ್ ಒಂದರಲ್ಲಿ ಸಾವನಪ್ಪಿದ ಘಟನೆ ಮಂಗಳವಾರ ನಡೆದಿದೆ.
ರಾಮದುರ್ಗ ಪಟ್ಟಣದ ನಾಯಕ ಲಾಡ್ಜ್ ನಲ್ಲಿ ಮಾನಸಿಕ ಅಸ್ವಸ್ಥ ರೋಗಿ ಸಾವಿನಪ್ಪಿದ್ದಾನೆ. ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಯಲ್ಲಪ್ಪ ನಿಂಗಪ್ಪ ತಿರ್ಲಾಪುರ ಎಂಬ ವ್ಯಕ್ತಿ ಕಳೆದ ಹದಿನೈದು ದಿನಗಳಿಂದ ಕಾಣೆಯಾಗಿದ್ದ.
ಲಾಡ್ಜ್ ರೂಂ ಸ್ವಚ್ಚಗೊಳಿಸಲು ಹೋದ ಸಿಬ್ಬಂದಿ ಅನುಮಾನಗೊಂಡು ಕೋಣೆ ಬಾಗಿಲು ಬಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.