ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಎಪಿ ಬಬಲಿಸಿ – ಟೋಪಣ್ಣವರ
ಬೆಳಗಾವಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಬಿರು ಬಿಸಿಲಿನಲ್ಲಿಯೂ ಸೋಮವಾರ ವೈಭವ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಈ ಬಾರಿ ಆಮ್ ಆದ್ಮಿಗೆ ಬೆಂಬಲಿಸಬೇಕು. ನನಗೆ ಒಂದು ಅವಕಾಶವನ್ನು ಮತದಾರರು ಕೊಡಬೇಕು ಎಂದು ರಾಜಕುಮಾರ ಟೋಪಣ್ಣವರ ನೂರಾರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು.
ಉತ್ತರ ಮತಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಮಹಿಳೆಯರ ರಕ್ಷಣೆಗೆ ಒತ್ತು ನೀಡಲಾಗುವುದು, ಯುವಕರ ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು ಎಂದು ಪ್ರಚಾರದಲ್ಲಿ ಟೋಪಣ್ಣವರ ಭರವಸೆ ನೀಡಿದರು.