
ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರ ತೆರೆಯಲು ಕ್ಷಣಗಣನೆ ; ಸರ್ಪಗಳ ಭಯದಲ್ಲಿ ಅಧಿಕಾರಿಗಳು

ಪುರಿ : ಒಡಿಶಾ ರಾಜ್ಯದ ಐತಿಹಾಸಿಕ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರದ ಖಜಾನೆ ತೆರೆಯಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇನ್ನೇನು ಕೆಲವೇ ಸಮಯದಲ್ಲಿ ರತ್ನಭಂಡಾರದ ರಹಸ್ಯ ಹೊರಗೆ ಬರಲಿದೆ.
ಒಡಿಶಾ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಬಿಜೆಪಿ ಜನರಿಗೆ ಕೊಟ್ಟ ಆಶ್ವಾಸನೆಯಂತೆ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರ ತೆರೆಯುವ ಕಾರ್ಯ ನಡೆದಿದೆ. 12 ನೇ ಶತಮಾನಗಳಿಂದಲೂ ಪುರಿ ಜಗನ್ನಾಥ ಮಂದಿರ ಕೊನೆಯಲ್ಲಿ ಆಭರಣಗಳ ಭಂಡಾರ ಇದ್ದು ಸಧ್ಯ ಎಣಿಕೆ ಆಗಲಿದೆ.
1978 ರಲ್ಲಿ ಅಂದಿನ ಸರ್ಕಾರ ಜಗನ್ನಾಥ ದೇವಾಲಯದ ರತ್ನ ಭಂಡಾರ ಓಪನ್ ಮಾಡಲಾಗಿತ್ತು. ಇದಾದ 46 ವರ್ಷಗಳ ನಂತರ ಈ ರತ್ನಭಂಡಾರದ ಬಾಗಿಲು ತೆರೆದಿದ್ದು ಕೋಟ್ಯಾಂತರ ಮೌಲ್ಯದ ಚಿನ್ನಾಭರಣದ ಎಣಿಕೆ ನಡೆಯಲಿದೆ.
ಪುರಿಯ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರವನ್ನು ಸರ್ಪಗಳು ಕಾಯುತ್ತಿವೆ ಎಂಬ ಮಾತೂ ಇದೆ. ಇದರಿಂದ ಭಯದಲ್ಲಿರುವ ಅಧಿಕಾರಿಗಳು ಹಾವು ಹಿಡಿಯುವ ತಜ್ಞರನ್ನೂ ಕರೆಸಿಕೊಂಡಿದ್ದಾರೆ. ಜೊತೆ ಮುನ್ನೆಚ್ಚರಿಕೆಯಾಗಿ ವೈದ್ಯರನ್ನು ದೇವಸ್ಥಾನದ ಆವರಣದಲ್ಲಿ ಇಟ್ಟುಕೊಳ್ಳಲಾಗಿದೆ.