
ಪ್ರೀತಿಗಾಗಿ ಬೆಳಗಾವಿಗೆ ಬಂದವಳು ಹೆಣವಾದಳು ; ಮೈಸೂರು ಹುಡುಗಿ ಬದುಕು ದುರಂತ ಅಂತ್ಯ

ಬೆಳಗಾವಿ : ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿಕೊಂಡಿದ್ದ ಯುವತಿ ಸ್ನೇಹಿತನ ಮೋಸದ ಬಲೆಗೆ ಸಿಲುಕಿ ಗರ್ಭಿಣಿ ಮಹಿಳೆ ನಿಗೂಢವಾಗಿ ಸಾವಣಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮೈಸೂರು ಮೂಲದ ಯುವತಿ ಮಂಜುಳಾ ಅಲಿಯಾಸ್ ನಯನಾ (23) ಎಂಬುವವರನ್ನು ಸೋಶಿಯಲ್ ಮೀಡಿಯಾ ಮೂಲಕ ಬೆಳಗಾವಿಯ ಮಚ್ಚೆ ಗ್ರಾಮದ ಬೊರೇಶ್ ಎಂಬಾತನ ಸ್ನೇಹದ ಬೆಳೆಸಿಕೊಂಡಿದ್ದ.
ಕಳೆದ ಒಂದು ವರ್ಷದ ಹಿಂದೆ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಯನಾ ನಿಗೂಢವಾಗಿ ಸಾವಣಪ್ಪಿದ್ದು ಯುವತಿ ಕುಟುಂಬದವರು ಕೊಲೆ ಆರೋಪ ಮಾಡಿದ್ದಾರೆ.
ಒಂದು ವರ್ಷದ ಹಿಂದೆ ಮದುವೆಯಾಗಿದ್ದ ನಯನಾ ಮೂರು ತಿಂಗಳು ಗರ್ಭಿಣಿ. ಆದರೆ ಪತ್ನಿ ಗರ್ಭಿಣಿಯಾಗಿದ್ದು ಬೋರೇಶನಿಗೆ ಇಷ್ಟವಿರಲಿಲ್ಲ. ಗರ್ಭಪಾತ ಮಾಡಿಸುವಂತೆ
ಗಂಡನ ಮನೆಯವರು ಪೀಡಿಸುತ್ತಿದ್ದರು ಎಂದು ನಯನಾ ತವರು ಮನೆಯಲ್ಲಿ ಅಳಲು ತೋಡಿಕೊಂಡಿದ್ದಳು. ಸಧ್ಯ ಬೋರೇಶ್ ಮನೆಯವರೇ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಯುವತಿ ತಾಯಿ ಆರೋಪಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್. ಯುವತಿಗೆ ಹುಡುಗನ ಮನೆಯವರು ಮಾನಸಿಕ ಹಿಂಸೆ ನೀಡಿದ್ದಾರೆ. ಪ್ರಕರಣದ ತನಿಖೆಗೆ ಎರಡು ಪ್ರತ್ಯೇಕ ತಂಡ ರಚನೆ ಮಾಡಲಾಗುವುದು ಹಾಗೂ ಯುವತಿಯ ಕುಟುಂಬದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.