Select Page

Advertisement

ಕೈ‌ ಮುಗಿದರು ಅಜ್ಜಿಯನ್ನು ಬಿಡದ ಕಾಮುಕ ಪ್ರಜ್ವಲ್ ; ಸ್ಪೋಟಕ ಮಾಹಿತಿ ಬಹಿರಂಗ

ಕೈ‌ ಮುಗಿದರು ಅಜ್ಜಿಯನ್ನು ಬಿಡದ ಕಾಮುಕ ಪ್ರಜ್ವಲ್ ; ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು : ಕೈ ಮುಗಿದು ಬೇಡಿಕೊಂಡರು ವೃದ್ಧೆಯ ಮೇಲೆಯೂ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದನಾ ಎಂಬ ಪ್ರಶ್ನೆ ಮೂಡಿದೆ.

ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ವಿರುದ್ಧ ನಿನ್ನೆ ಎಸ್ಐಟಿ 2ನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಇದರಲ್ಲಿ ಸ್ಪೋಟಕ ಮಾಹಿತಿ ಒಂದು ಬೆಳಕಿಗೆ ಬಂದಿದ್ದು 60 ವರ್ಷದ ವೃದ್ಧೆಯ ಮೇಲೆಯೂ ಕಾಮುಕ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವ ಮಾಹಿತಿ ಅಡಗಿದೆ ಎಂದು ಹೇಳಲಾಗುತ್ತಿದೆ.

ಬೇಡ ದಯಮಾಡಿ ನನ್ನನ್ನು ಬಿಟ್ಟುಬಿಡಿ ಎಂದು ಎಷ್ಟೇ ಕೇಳಿಕೊಂಡರು ಪ್ರಜ್ವಲ್ ರೇವಣ್ಣ ಬಿಟ್ಟಿಲ್ಲ. ಹೊಳೆನರಸೀಪುರ ಮನೆ ಕೆಲಸಕ್ಕೆ ಬರುತ್ತಿದ್ದ ವೃದ್ಧೆಯ ಮೇಲೆ ಅನೇಕ ಬಾರಿ ಕಾಮುಕ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವ ಮಾಹಿತಿ ಇದೆ ಎನ್ನಲಾಗಿದೆ.

ಸಿ ಆರ್ ಪಿ ಸಿ 164 ರ ಅಡಿಯಲ್ಲಿ ಸಂತ್ರಸ್ತೆ ಯಾಗೂ ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ತನಿಖಾಧಿಕಾರಿಗಳು ಪಡೆದಿದ್ದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!