ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಬಿಗ್ ಬಾಸ್ ಮನೆಗೆ : ಅನುದಾನ ಇಲ್ಲದೆ ಖಾಲಿ ಕುಳಿತ ಎಂಎಲ್ಎ ಗಳು ಮತ್ತೇನು ಮಾಡ್ತಾರೆ ಎಂದ ನೆಟ್ಟಿಗರು…!
ಬೆಂಗಳೂರು : ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದು ಸಧ್ಯ ಎಲ್ಲೆಡೆ ಬಾರಿ ವೈರಲ್ ಆಗಿದೆ. ಒಬ್ಬ ಶಾಸಕ ಆದವರು ಜನರ ಸಮಸ್ಯೆ ಕೇಳುವುದು ಬಿಟ್ಟು ರಿಯಾಲಿಟಿ ಶೋ ಮಾಡುವುದು ಎಷ್ಟು ಸರಿ ಎಂಬ ಚರ್ಚೆ ಮಧ್ಯೆ ನೆಟ್ಟಿಗರು ಆಡಿಕೊಳ್ಳುವುದೇ ಬೇರೆ.
ಹೌದು ಚಿಕ್ಕಬಳ್ಳಾಪುರ ಶಾಸಕ ಹಾಗೂ ಮಾತುಗಾರ ಮತ್ತು ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥ ಪ್ರದೀಪ್ ಈಶ್ವರ್ ( pradeep Eshwar ) ಬಡತನದಿಂದ ಮೇಲೆ ಬಂದ ವ್ಯಕ್ತಿ. ನೀಟ್ ಅಕಾಡೆಮಿ ( Parishrama neet Academy ) ಮೂಲಕ ಹೆಸರು ಮಾಡಿದವರು.
ಸಧ್ಯ ಬಿಗ್ ಬಾಸ್ – 10 ( Bigg boss – 10 ) ಕನ್ನಡ ರಿಯಾಲಿಟಿ ಶೋ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸಧ್ಯ ಇವರ ವಿರುದ್ಧ ಹಾಗೂ ಪರ ಅಭಿಪ್ರಾಯ ಮೂಡುತ್ತಿದ್ದು, ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.
ಇದರಲ್ಲಿ ಹಲವರು ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಕೊರತೆ ಇದೆ. ಸರ್ಕಾರ ರಚನೆ ಮಾಡಿ ನಾಲ್ಕು ತಿಂಗಳು ಕಳೆದರು ಗ್ಯಾರಂಟಿ ಗದ್ದಲದಲ್ಲೇ ದಿನಾ ಕಳೆಯುವಂತಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಶಾಸಕರಿಗೆ ಅನುದಾನ ಕೊಡುತ್ತಿಲ್ಲ ಎಂಬ ಮಾತು ಎಲ್ಲೆಡೆ ಇದೆ. ಇದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಸಧ್ಯ ಪ್ರದೀಪ್ ಈಶ್ವರ್ ಅವರನ್ನು ಟ್ರೋಲ್ ಮಾಡುತ್ತಿದ್ದು, ಅನುದಾನ ಇಲ್ಲದೆ ಖಾಲಿ ಕುಳಿತ ಶಾಸಕರು ಏನು ಮಾಡಲು ಸಾಧ್ಯ. ಅದಕ್ಕೆ ರಿಯಾಲಿಟಿ ಶೋ ಮೂಲಕ ಹಣ ಆದರು ಮಾಡಲಿ ಎಂದು ಅಭಿಪ್ರಾಯ ಮಂಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಶಾಸಕ ಪ್ರದೀಪ್ ಈಶ್ವರ್ ಕುರಿತು ಪರ ವಿರೋಧ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.


