ರಾಜ್ಯದಲ್ಲೇ ಮಾದರಿ ಕೆಲಸ ಮಾಡಿದ ಶಾಸಕ ಪ್ರದೀಪ್ ಈಶ್ವರ್…! ಏನದು ಗೊತ್ತಾ…?
ಚಿಕ್ಕಬಳ್ಳಾಪುರ : ತಮ್ಮ ಭಾಷಣಗಳಿಂದ ರಾಜ್ಯದ ಜನರ ಮನೆ ಮಾತಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ( Pradeep Eshwar ) ಮಹತ್ವದ ಕಾರ್ಯ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದಂತೆ ಅಮ್ಮ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ್ದಾರೆ.
ಹೌದು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರತಿ ಹೋಬಳಿಗೆ ಒಂದರಂತೆ ಅಮ್ಮ ಆಂಬುಲೆನ್ಸ್ ಸೇವೆ ಪ್ರಾರಂಭಿಸುದಾಗಿ ಹೇಳಿದ್ದರು. ಸಧ್ಯ ಕೊಟ್ಟ ಮಾತಿನಂತೆ ಐದು ಆಂಬುಲೆನ್ಸ್ ನೀಡಿದ್ದು ಸಧ್ಯ ತಾಲೂಕಿನಲ್ಲಿ ಸೇವೆ ಪ್ರಾರಂಭವಾಗಿದೆ.
ಕೇವಲ ಅಷ್ಟೇ ಅಲ್ಲದೆ, ಗಣೇಶ ಚತುರ್ಥಿಗೆ ತಾಲೂಕಿನ ಮಕ್ಕಳಿಗೆ ಬಟ್ಟೆಗಳನ್ನು ನೀಡುವ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕ್ಷೇತ್ರದ ಮಕ್ಕಳಿಗೆ ಉಚಿತ ನೀಟ್ ಕೋಚಿಂಗ್ ಕೊಡುವುದಾಗಿ ಘೋಷಣೆ ಮಾಡಿದ್ದು, ರಾಜ್ಯದಲ್ಲೇ ಮಾದರಿ ಕಾರ್ಯ ಶಾಸಕರು ಮಾಡುತ್ತಿದ್ದಾರೆ.
ಚುನಾವಣೆ ಮುಕ್ತಾಯವಾಗಿ ನಾಲ್ಕು ತಿಂಗಳಾದರೂ ಇನ್ನೂ ಕೆಲ ಶಾಸಕರು ಸನ್ಮಾನದಲ್ಲಿ ತೊಡಗಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಮೂಲಕ ಜನರ ಸಮಸ್ಯೆ ಅರಿಯುವ ಕೆಲಸ ಮಾಡುತ್ತಿರುವುದು ವಿಶೇಷ.


