
ಬೆಳಗಾವಿಯಲ್ಲೊಂದು ಪೋಕ್ಸೊ ಪ್ರಕರಣ ದಾಖಲು : ಹುಟ್ಟಿದ ಶಿಶುವನ್ನು ಎಸೆದಿದ್ದ ಕಿರಾತಕ

ಖಾನಾಪುರ : ಅಪ್ರಾಪ್ತ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡ ಯುವಕನೋರ್ವನ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಅವಳಿಗೆ ಹುಟ್ಟಿದ್ದ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬೀಸಾಡಿದ್ದ ಪ್ರಕರಣದಲ್ಲಿ ತಾಲೂಕಿನ ಗವಳಿವಾಡ – ನೆರ್ಸಾ ಗ್ರಾಮದ ಮಲು ಅಪ್ಪು ಪಿಂಗಳೆ (19) ಎಂಬುವವನನ್ನು ಬಂಧಿಸಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಯುವಕನಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆತನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ತಡೆ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಹಿನ್ನಲೆ : ಆಗಸ್ಟ್ 25 ರಂದು ಬೆಳಿಗ್ಗೆ ನೆರ್ಸಾ-ಗವಳಿವಾಡದಲ್ಲಿ ಒಂದು ದಿನದ ಗಂಡು ಶಿಶುವು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಬೆಳಕೆಗೆ ಬರುತ್ತಿದ್ದಂತೆ ಕೂಡಲೇ ಸ್ಥಳೀಯ ಸರ್ಕಾರಿ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಮಗುವನ್ನು ರಕ್ಷಣೆ ಮಾಡಿದ್ದರು. ಸಧ್ಯ ಈ ಘಟನೆ ಹಿಂದೆ ಬಿದ್ದಿದ್ದ ಖಾನಾಪುರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.