Select Page

Advertisement

ಪಂಜಾಬ್ ಮುಖ್ಯಮಂತ್ರಿ ಎರಡನೇ ಮದುವೆ…! ಸಿಎಂ ಕೈ ಹಿಡಿದ ಚೆಲುವೆ ಯಾರಿವಳು….?

ಪಂಜಾಬ್ ಮುಖ್ಯಮಂತ್ರಿ ಎರಡನೇ ಮದುವೆ…! ಸಿಎಂ ಕೈ ಹಿಡಿದ ಚೆಲುವೆ ಯಾರಿವಳು….?

ಪಂಜಾಬ್ : ಎಎಪಿ ಪಕ್ಷದ ಪಂಜಾಬ್ ಮುಖ್ಯಮಂತ್ರಿಯಾಗಿ ಕಳೆದ ಕೆಲವು ದಿನಗಳ ಹಿಂದೆ  ಅಧಿಕಾರ ಪಡೆದ ಭಗವಂತ್ ಮಾನ್ ಅವರು, ವೈವಾಹಿಕ ಜೀವನದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ಮೊದಲ ಹೆಂಡತಿಗೆ ವಿಚ್ಛೇದನ ನೀಡಿರುವ ಕಾರಣ ಸಧ್ಯ ಮತ್ತೊಬ್ಬ ಸುಂದರಿ ಕೈ ಹಿಡಿದಿದ್ದಾರೆ.

48 ವರ್ಷದ ಭಗವಂತ್ ಮಾನ್ ಅವರು 32 ವರ್ಷದ ಚಲುವೆ ಡಾ. ಗುರುಪ್ರೀತ್ ಕೌರ್ ಅವರನ್ನು ವರಿಸುವ ಮೂಲಕ ಗುರುವಾರದ ಶುಭ ಮುಹೂರ್ತದಲ್ಲಿ ವಿವಾಹವಾಗಿದ್ದಾರೆ. ಈ ಹಿಂದೆ ಮಾನ್ ಇಂದರ್‌ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು, 2014 ರಲ್ಲಿ ವಿಚ್ಚೇದನ ಪಡೆದಿದ್ದರು. ಈ ದಂಪತಿಗೆ 21 ವರ್ಷದ ಪುತ್ರಿ ಸೀರತ್ ಕೌರ್ ಮಾನ್, ಹಾಗು 17 ವರ್ಷದ ಮಗ ದಿಲ್ಶನ್ ಮಾನ್ ಇದ್ದಾರೆ.

ಸಧ್ಯ ಭಗವಂತ್ ಮಾನ್ ಅವರು ಕೈ ಹಿಡಿದಿರುವ ಸುಂದರಿ ಹೆಸರು ಡಾ. ಗುರುಪ್ರೀತ್ ಕೌರ್. ಇವರು ಮಹರ್ಷಿ ಮಾರ್ಕಂಡೇಶ್ವರ ವಿಶ್ವ ವಿದ್ಯಾನಿಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ‌. ಇಬ್ಬರ ಕುಟುಂಬ ದೂರದ ಸಂಬಂಧ ಹೊಂದಿದ್ದು ಇವರಿಬ್ಬರ ಪ್ರೀತಿ ಮದುವೆ ಹಂತಕ್ಕೆ ಬಂದು ತಲುಪಿದ್ದು ವಿಶೇಷ. ಗುರ್ ಪ್ರೀತ್ ಅವರಿಗೆ ಇಬ್ಬರು ಸಹೋದರಿಯರಿದ್ದು ಅಮೇರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

ಅತ್ಯಂತ ಸಡಗರದಿಂದ ನಡೆದ ಮದುವೆ ಸಮಾರಂಭದಲ್ಲಿ ದೇಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಶಾಸಕರು ಸಂಸದರು ಹಾಗೂ ಭಗವಂತ್ ಮಾನ್ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಪಾಲ್ಗೊಂಡು ವಧು ವರರಿಗೆ ಆಶಿರ್ವಾದ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *