ಭಾರತ ಪಾಕ್ ನಡುವಿನ ಗಡಿ ಬಂದ್ ; ಪಾಕಿಸ್ತಾನ ಮಗ್ಗಲು ಮುರಿದ ಪ್ರಧಾನಿ ಮೋದಿ
ನವದೆಹಲಿ : ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) 26 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಭಾರತ ಸರಿಯಾದ ಪ್ರತ್ಯುತ್ತರ ನೀಡಲು ಸಜ್ಜಾಗಿದೆ.
ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದು ಬೆಳಕಿಗೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ವಾಘಾ ಗಡಿ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನೂ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆ ಒಳಗೆ ದೆಶ ತೊರೆಯುವಂತೆ ಆದೇಶ ನೀಡಲಾಗಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ ವಿಸಾ ನಿರಾಕರಣೆ ಮಾಡಲಾಗಿದೆ. ಸಾರ್ಕ್ ಶೃಂಗಸಭೆಗೂ ಪಾಕಿಸ್ತಾನಿಗಳಿಗೆ ವಿಸಾ ನಿರಾಕರಿಸಲಾಗಿದೆ.
ಪಾಕಿಸ್ತಾನಕ್ಕೆ ಹೋಗುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ತಾತ್ಕಾಲಿಕ ಸ್ಥಗಿತ ನೀಡಲಾಗಿದೆ. ಇದರಿಂದ ಒಂದು ರೀತಿಯಲ್ಲಿ ಜಲಬಾಂಬ್ ಪ್ರಯೋಗಿಸಿದಂತಾಗಿದೆ. ವಾರದೊಳಗೆ ಪಾಕಿಸ್ತಾನದಿಂದ ರಾಜತಾಂತ್ರಿಕ ಅಧಿಕಾರಿಗಳು ವಾಪಸ್ ತೆರಳುವಂತೆ ಆದೇಶ ಹೊರಡಿಸಲಾಗಿದೆ.

