
ಬೆಳಗಾವಿ ಸಚಿವರೊಬ್ಬರ ಮೇಲೆ ಭೂಕಬಳಿಕೆ ಬಾಂಬ್ ಹಾಕಿದ ಪಿ. ರಾಜೀವ್

ಬೆಳಗಾವಿ : ಜಿಲ್ಲೆಯ ಸಚಿವರೊಬ್ಬರು ಭೂಕಬಳಿಕೆ ಮಾಡಿರುವ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ.ಶೇಕಡಾ 70 ರಷ್ಟು ದಾಖಲೆ ಸಂಗ್ರಹವಾಗಿವೆ.ಪೂರ್ತಿ ದಾಖಲೆ ಸಿಕ್ಕ ಬಳಿಕವೇ ನಾನೇ ಆ ಸಚಿವರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಎಲ್ಲಾ ಸಚಿವರು ಒಂದಿಲ್ಲೊಂದು ಅಕ್ರಮ ಎಸಗಿದ್ದಾರೆ.
ಜಿಲ್ಲೆಯ ಸಚಿವರೊಬ್ಬ ಭೂಕಬಳಿಕೆ ಮಾಡಿರುವ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ.ಶೇಕಡಾ 70 ರಷ್ಟು ದಾಖಲೆ ಸಂಗ್ರಹವಾಗಿವೆ.ಪೂರ್ತಿ ದಾಖಲೆ ಸಿಕ್ಕ ಬಳಿಕವೇ ನಾನೇ ಆ ಸಚಿವರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಮುಡಾ ಪ್ರಕರಣವನ್ನ ರಾಜಪಾಲರು ತನಿಖೆಗೆ ಕೊಟ್ಟರು. ಇದನ್ನ ಕಾಂಗ್ರೆಸ್ ನಾಯಕರು ಅವಹೇನಕಾರಿಯಾಗಿ ಮಾತನಾಡಿದರು. ನೈತಿಕತೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು. ಆದ್ರೆ ಸಿಎಂ ಇವತ್ತು ದಸರಾ ಉತ್ಸವ ಚಾಲನೆ ಕೊಡ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಲೋಕೋಪಯೋಗಿ ನಿಷ್ಕ್ರಿಯ ಗೊಳಿಸಿ ಎಸಿಬಿ ರಚಿಸಿದರು. ಆದ್ರೆ ಇವತ್ತು ಸಿಎಂ ಸಿದ್ದರಾಮಯ್ಯ ಕಾನೂನಿಗೆ ಅಪಚಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯ ನ್ನ ಸರಿಯಾಗಿ ಅನುಷ್ಠಾನ ಮಾಡಿಲ್ಲ. ವಿದ್ಯುತ್, ಬಸ್ ಸೇರಿ ಎಲ್ಲದರ ದರ ಹೆಚ್ಚಾಗಿದೆ.ವಾಲ್ಮೀಕಿ ಹಗರಣ ಬೆಳಕಿಗೆ ಬಂದಿದೆ ವಾಲ್ಮೀಕಿ ನಿಗಮದ ಸಿಬ್ಬಂದಿಗೆ ವೇತನ ಕೊಡಲು ಹಣವಿಲ್ಲ ಎಂದರು.
ಸ್ವಯಂ ಆರ್ಥಿಕ ತಜ್ಞ ಎನಿಸಿಕೊಂಡಿರೋ ಸಿದ್ದರಾಮಯ್ಯ ಅವರು, ಅದನ್ನ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯ ಸಾಲದ ಸುಳಿಗೆ ಸಿಲುಕಿಸುತ್ತಿದ್ದಾರೆ. ಆರ್ಥಿಕ ಬಲವಾಗಿದ್ದ ಕರ್ನಾಟಕ ವನ್ನ ಸಾಲದ ಸುಳಿಗೆ ಸಿಲುಕಿಸಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.