ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ..? ವೈರಲ್ ಸುದ್ದಿ ಹಿಂದೆ ಅನುಮಾನ…!
ಸ್ವಯಂ ಘೋಷಿತ ದೇವಮಾನ ಹಾಗೂ ಬಿಡದಿಯ ಆಶ್ರಮದಲ್ಲಿ ಇದ್ದ ನಿತ್ಯಾನಂದ ಸ್ವಾಮಿ ವಿಧಿವಶರಾಗಿದ್ದಾನೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ಆತನ ಸೋದರಳಿಯನ ಆಡಿಯೊ ಸಾಕಷ್ಟು ಅನುಮಾನ ಮೂಡಿಸಿದೆ.
ಹೌದು ತನ್ನದೇ ಒಂದು ದೇಶ ಕಟ್ಟಿಕೊಂಡು ಹಾಯಾಗಿದ್ದ ನಿತ್ಯಾನಂದ ಸ್ವಾಮಿ ಕಳೆದ ಎರಡು ದಿನಗಳ ಹಿಂದೆ ನಿಧನರಾಗಿದ್ದಾನೆ ಎಂದು ಆತನ ಸಹೋದರಿಯ ಮಗ ಸುಂದರೇಶ್ವರನ್ ಆಡಿಯೋ ಮೂಲಕ ಸ್ಪಷ್ಟೊಡಿಸಿದ್ದು ಈ ಕುರಿತು ಹಲವು ಅನುಮಾನ ಮೂಡಿದೆ.
ಕಳೆದ ಕೆಲ ದಿನಗಳ ಹಿಂದೆ ನಿತ್ಯಾನಂದ ಸ್ವಾಮಿಗೆ ಅನಾರೋಗ್ಯದ ಉಂಟಾಗಿದೆ ಎಂದು ಹೇಳಲಾಗಿತ್ತು. ಈ ಮಧ್ಯೆ ನಿತ್ಯಾನಂದ ಸಾವಿನ ಸುದ್ದಿ ಹರಿದಾಡುತ್ತಿದ್ದು, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ನಿತ್ಯಾನಂದನ ಆಶ್ರಮದ ಮೂಲಗಳಿಂದ ಖಚಿತಗೊಳ್ಳಬೇಕಿದೆ.


