ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಟ್ಯಾಂಕರ್ ಸ್ಪೋಟ
ಬೆಳಗಾವಿ : ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿಪ್ಪಾಣಿ ಹೊರವಲಯದ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಇಂದನ ತುಂಬಿದ ಟ್ಯಾಂಕ್ ಸ್ಪೋಟಗೊಂಡ ಘಟನೆ ಸಂಭವಿಸಿದೆ.
ಟೋಲ್ ನಲ್ಲಿ ಹಣ ಕಟ್ಟಿ ಲಾರಿ ಮುಂದೆ ಸಾಗುವ ವೇಳೆ ಡಿಸೇಲ್ ಟ್ಯಾಂಕ್ ಸ್ಪೋಟಗೊಂಡಿದ್ದು ಈ ಸಂದರ್ಭದಲ್ಲಿ ಎರಡು ಟೋಲ್ ಸಂಗ್ರಹ ಘಟಕಗಳು ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಬಂದಿದ್ದು ಬೆಂಕಿ ನಂದಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ.


