ಬೆಳಗಾವಿ : ಭೀಕರ ರಸ್ತೆ ಅಪಘಾತ ; ನಾಲ್ವರು ಸಾವು
ಬೆಳಗಾವಿ : ಟ್ರಕ್ ನ ಬ್ರೇಕ್ ಹಾಳಾಗಿ ನಿಯಂತ್ರಣ ತಪ್ಪಿ ನಾಲ್ಕೈದು ವಾಹನಕ್ಕೆ ಡಿಕ್ಕಿ ಹೊಡೆದು ನೆಲಕ್ಕೆ ಉರುಳಿದ
ಪರಿಣಾಮ ನಾಲ್ವರು ಮೃತಪಟ್ಟಿದ್ದು ಅನೇಕರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಭಾನುವಾರ ಸಂಜೆ ನಿಪ್ಪಾಣಿ ತಾಲೂಕಿನ ತಂವದಿ ಘಾಟ್ ಬಳಿ ತಮಿಳುನಾಡು ಮೂಲದ ಟ್ರಕ್ ಬ್ರೇಕ್ ಕಟ್ ಆದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ನಾಲ್ಕೈದು ಕಾರುಗಳಿಗೆ ಹೊಡೆದಿದೆ.
ಈ ಅಪಘಾತದಲ್ಲಿ ಖಡಕಲಾಟ – ಸಂತೋಷ್ ಮಾನೆ (45 ), ರೇಖಾ ಗಾಡಿವಡ್ಡರ ( 35 ), ನಿಪ್ಪಾಣಿ – ಜಬಿನ್ ಮಕಾನದಾರ್ ( 58 ), ಕೊಲ್ಲಾಪುರ ದಿಲ್ದಾರ್ ಮುಲ್ಲಾ ( 61 ) ಮೃತಪಟ್ಟವರು.
ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಹಾಗೂ ನಿಪ್ಪಾಣಿ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದರು.


