
ಸಿದ್ದರಾಮಯ್ಯ ಚುಮ್ಮಾ ಸಿಎಂ ; ಮುತ್ತು ಕೊಡುವ ದಾಖಲೆ ಇದೆ ಎಂದ ನಾಜಿಯಾ

ಬೆಳಗಾವಿ : ನಾನು ಕರ್ನಾಟಕದ ಮುಖ್ಯಮಂತ್ರಿಯನ್ನು ನೋಡಿದ್ದೇನೆ. ಒಮ್ಮೆ ಮಹಿಳಾ ಕಾರ್ಯಕರ್ತೆಗೆ ಮುತ್ತು ಕೊಡುತ್ತಾರೆ. ಸಿನೆಮಾ ನಟಿ ಭೇಟಿಯಾದರೆ ಮುತ್ತು ಕೊಡುತ್ತಾರೆ. ಅದೆಷ್ಟೋ ಮಹಿಳಾ ಪತ್ರಕರ್ತರಿಗೂ ಮುತ್ತು ಕೊಟ್ಟಿದ್ದಾರೆ ಎಂದು ಬಿಜೆಪಿ ನಾಯಕಿ ನಾಜಿಯಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಕರ್ನಾಟಕದ ಮುಖ್ಯಮಂತ್ರಿ ಎಷ್ಟು ಜನರಿಗೆ ಮುತ್ತು ಕೊಟ್ಟಿದರುವ ದಾಖಲೆಗಳು ನನ್ನ ಬಳಿ ಇವೆ ಎಂದರು.
ನಾನು 32 ವರ್ಷದಿಂದ ಮುಸ್ಲಿಂ ಆಗಿದ್ದೇನೆ. ಈಗ ಸನಾತನಿ ಮುಸ್ಲಿಂ ಆಗಲು ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಸನಾತನಿ ಆಗುತ್ತೇನೆ ಎಂದು ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ಹೇಳಿದರು.
ಕಳೆದ 54 ವರ್ಷದಿಂದ ಹಿಂದೂಗಳು ಮಲಗಿದ್ದರು. ಈ ರೀತಿ ಹಿಂದೂ ಜಾಗೃತಿ ಸಭೆಗಳನ್ನು ಮಾಡಿ ಎಚ್ಚರಿಸುವ ಕಾರ್ಯ ನಡೆಯುತ್ತಿದೆ. ಇಂಥ ಜಾಗೃತಿ ಸಭೆಗಳಲ್ಲಿ ಭಾಗಿಯಾಗುತ್ತಿರುವುದು ನನ್ನ ಪುಣ್ಯ ಎಂದರು.
ದೇಶದಲ್ಲಿ ಯಾವ ರೀತಿ ರಾಮ ನಾಮ ಜಪವಾಗುತ್ತಿದೆ ಅದೇ ರೀತಿ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ನೂರಾರು ವರ್ಷಗಳ ತಪ್ಪಸ್ಸು ಸಫಲವಾಯಿತು, ರಾಮ ಮಂದಿರ ನಿರ್ಮಾಣವಾಯಿತು ಎಂದು ಗರ್ವದಿಂದ ಹೇಳುತ್ತೇನೆ. ಗೋ ಹತ್ಯೆ ನಿಲ್ಲಬೇಕು. ಹಿಂದೂಗಳ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು ಎಂದರು.
ವಕ್ಪ್ ಬೋಡ್೯ ಹೆಸರಿನಲ್ಲಿ ಭೂ ಮಾಫಿಯಾ ನಡೆಯುತ್ತಿದೆ. ಸಂವಿಧಾನದಲ್ಲಿ ವಕ್ಫ್ ಬೋಡ್೯ ಬಗ್ಗೆ ಉಲ್ಲೇಖ ಮಾಡಿಲ್ಲ. ಕೇಂದ್ರ ಸರಕಾರ ಮನಸ್ಸು ಮಾಡಿದರೆ ಬೇಕಾದನ್ನು ಮಾಡಬಹುದು. ಮುಸ್ಲಿಮ್ ಮಹಿಳೆಯರೇ ನಿಮ್ಮ ಗಂಡನಿಗೆ ತಲಾಖ್ ಕೊಟ್ಟು ಹಿಂದೂತ್ವಕ್ಕೆ ಮತಾಂತರವಾಗಿ ಬೇರೆ ಮದುವೆ ಮಾಡಿಸಿ ಹನಿಮೂನ್ ಗೆ ಕಳುಸುತ್ತೇವೆ ಎಂದರು.