ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ ಸಲ್ಲಿಕೆ
ಬೆಂಗಳೂರು : ಹದಿನೇಳನೆ ಲೋಕಸಭೆ ವಿಸರ್ಜನೆ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸಚಿವ ಸಂಪುಟ ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 17 ನೇ ಲೋಕಸಭಾ ವಿಸರ್ಜನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟವನ್ನು ವಿಸರ್ಜನೆ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಲಿರುವ ಹಿನ್ನಲೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ನಿನ್ನೆಯಷ್ಟೇ ಲೋಕಸಭಾ ಚುನಾವಣಾ ಫಲಿತಾಂಶ ಬಂದಿದ್ದು ಅತೀ ಹೆಚ್ಚು ಸ್ಥಾನ ಪಡೆದ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಸರ್ಕಾರ ರಚನೆಗೆ ಶಿಪಾರಸ್ಸು ಮಾಡಲಿದೆ. 292 ಸ್ಥಾನ ಪಡೆದಿರುವ ಎನ್.ಡಿ.ಎ ಮೈತ್ರಿಕೂಟ ಈ ಬಾರಿ ಸರ್ಕಾರ ರಚನೆ ಮಾಡುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ.
ಇನ್ನೂ ಮೈತ್ರಿ ಭಾಗವಾಗಿರುವ ಬಿಹಾರ ನಿತೇಶ್ ಕುಮಾರ್ ಹಾಗೂ ತೆಲಂಗಾಣದ ಚಂದ್ರಬಾಬು ನಾಯ್ಡು ಎನ್.ಡಿ.ಎ ಗೆ ಬೆಂಬಲ ಘೋಷಿಸಿದ್ದು ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.


