ಬೆಳಗಾವಿಗೆ ಮರಳಿದ ನಾರಾಯಣ ಬರಮನಿ ; ಡಿಸಿಪಿ ಯಾಗಿ ನೇಮಕ
ಬೆಳಗಾವಿ : ಕಾಂಗ್ರೆಸ್ ಸಮಾವೇಶ ವೇಳೆ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೆ ಒಳಗಾಗಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ ತವರಿಗೆ ಮರಳಿದ್ದಾರೆ.
ರೋಹನ್ ಜಗದೀಶ್ ಅವರಿಂದ ತೆರವಾದ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೇಗೆ ನಾರಾಯಣ ಬರಮನಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಅವಮಾನಕ್ಕೆ ಒಳಗಾದ ಜಾಗದಲ್ಲೇ ಅವರನ್ನು ಡಿಸಿಪಿ ಮಾಡಿ ಸರಕಾರ ನೇಮಕ ಮಾಡಿದೆ. ಸಿಎಂ ಅವಮಾನಕ್ಕೆ ನೊಂದು ಬರಮನಿ ಅವರು ಸ್ವಯಂ ಪ್ರೇರಿತ ಸೇವಾ ನಿವೃತ್ತಿಗೆ ಸರಕಾರಕ್ಕೆ ಮನವಿ ಮಾಡಿದ್ದರು.


