Video – ಮೋದಿ ಮರಳಿ ಪ್ರಧಾನಿಯಾದರೆ ಮೀಸೆ ಬೋಳಿಸುವೆ : ವಕೀಲ ನಾಗರಾಜ್ ಕುಡಪಲಿ ಸವಾಲ್
ಮೈಸೂರು : ಖ್ಯಾತ ಕ್ರಿಮಿನಲ್ ವಕೀಲ ಹಾಗೂ ಅಖಿಲ ಭಾರತೀಯ ರಾಹುಲ್ ಗಾಂಧಿ ಬ್ರಿಗೇಡ್ ಅಧ್ಯಕ್ಷ ನಾಗರಾಜ ಕುಡಪಲಿ ಸವಾಲ್ ಹಾಕಿದ್ದು, ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಯಾಗುತ್ತಿದೆ.
ಮೈಸೂರಿನಲ್ಲಿ ನಡೆದ ವಕೀಲರ ಸಮಾವೇಶದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸಾಗರ ಮೂಲದ ಪ್ರವೀಣ್ ಎಂಬುವವರಿಗೆ ಸವಾಲ್ ಹಾಕಿದ್ದು, ಮುಂಬರುವ ಚುನಾವಣೆಯಲ್ಲಿ ಮೋದಿ ಜೊತೆ ನಾಲ್ಕಾರು ಜನ ಮಾತ್ರ ಆಯ್ಕೆಯಾಗುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಒಂದುವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನು ಮೀಸೆ ತಗೆಸಿಕೊಂಡು ರಾಣೆಬೆನ್ನೂರು ತುಂಬಾ ಓಡಾಟ ಮಾಡುವೆ ಎಂದು ಹೇಳಿದ್ದು ಸಧ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಹಿಂದೆ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದ ನಾಗರಾಜ ಕುಡಪಲಿಗೆ ಕೈ ಕೊಡಲಾಗಿತ್ತು. ನಂತರ ಮನನೊಂದು ಬೇರೆ ಪಕ್ಷದ ಪರವಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಿಗೆ ಹಿಗ್ಗಾಮುಗ್ಗಾ ಬೈದು ಸುದ್ದಿಯಾಗಿದ್ದರು.


