
ಅರಭಾವಿ ತಾಲೂಕಿನ ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ – ಲಕ್ಕಣ್ಣ ಸವಸುದ್ದಿ ಆಗ್ರಹ

ಬೆಳಗಾವಿ : ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಕ್ಷೇತ್ರದಲ್ಲಿ ಆಪ್ತ ಕಾಯದರ್ಶಿಗಳು ದರ್ಬಾರ್ ನಡೆಸುತ್ತಿದ್ದಾರೆ, ಹಾಗೂ ಅಧಿಕಾರಿಗಳ ಮಟ್ಟದ ಸಭೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಹೋರಾಟಗಾರ ಲಕ್ಕಣ್ಣ ಸವಸುದ್ದಿ ದೂರಿದರು.
ಭುದವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಯೋಜನೆಗಳ ಕಾಮಗಾರಿಗಳನ್ನು ಶಾಸಕರ ಬದಲಾಗಿ ಆಪ್ತ ಕಾರ್ಯದರ್ಶಿಗಳು ಕಾನೂನು ಬಾಹಿರವಾಗಿ ಚಾಲನೆ ನೀಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಜಾರಕಿಹೊಳಿ ಆಪ್ತರಿಗೆ ಗೋಕಾಕ ಹಾಗೂ ಮೂಡಲಗಿಯಲ್ಲಿ ಕಡಿವಾಣ ಇಲ್ಲ. ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಲಕ್ಕಣ್ಣ ಸವಸುದ್ದಿ ಆರೋಪಿಸಿದರು.
ಗೋಕಾಕ ತಾಲೂಕಿನಲ್ಲಿ ಶಾಸಕರ ಅಧಿಕಾರವನ್ನು ಅವರ ಕಾರ್ಯದರ್ಶಿಗಳಿಗೆ ಸರಕಾರದ ಕಾರ್ಯಕ್ರಮಗಳಿಗೆ ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದರು. ಶಾಸಕರ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದಾರೆ. ಗೋಕಾಕ ಹಾಗೂ ಮೂಡಲಗಿಯಲ್ಲಿ ಶಾಸಕರೇ ಇರುವುದಿಲ್ಲ. ಇದರೊಂದ ಇಲ್ಲಿ ಬೇಕಾಬಿಟ್ಟಿಯಾಗಿ ಅವರ ಪಿಎಗಳು ದರ್ಬಾರ್ ನಡೆಸಿದ್ದಾರೆ ಎಂದು ಆರೋಪಿಸಿದರು.

ಮೂಡಲಗಿ ತಾಲೂಕು ಘೋಷಣೆಯಾದರೂ ಸ್ವಚ್ಚ ಭಾರತ ಅಭಿಯಾನ ಹಾಗೂ ತಾಲೂಕಾ ಕಚೇರಿಗಳು ಇಲ್ಲಿಯವರೆಗೂ ಬಂದಿಲ್ಲ. ಅವುಗಳನ್ನು ಕೂಡಲೇ ಸರಕಾರ ಮಂಜೂರು ಮಾಡಬೇಕೆಂದು ಆಗ್ರಹಿಸಿದರು. ಹೊಸ ತಾಲೂಕು ಕೇವಲ ಸಕರ್ಸರದ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಇದರಿಂದ ಜನರಿಗೆ ಯಾವುದೇ ರೀತಿಯಲ್ಲಿ ಲಾಭವಿಲ್ಲ. ಸರಿಯಾದ ಮೂಲಭೂತ ಸೌಕರ್ಯ ಒದಗಿಸದಷ್ಷು ಸರ್ಕಾರಕ್ಕೆ ಬಡತನ ಬಂದಿದೆಯಾ ಎಂದು ಪ್ರಶ್ನಿಸಿದರು.
ಗೋಕಾಕ್ ಹಾಗೂ ಮೂಡಲಗಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಕೇವಲ ಶಾಸಕರು ಹಾಗೂ ಅವರ ಆಪ್ತ ಕಾರ್ಯದರ್ಶಿಗಳು ಹೇಳಿದಂತೆ ಮಾತ್ರ ಕೆಲಸ ನಡೆಯುತ್ತವೆ. ಕೂಡಲೇ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಹಾಗೂ ತಾಲೂಕಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಇನ್ನೂ ಎರಡು ದಿನಗಳ ಸಮಯಾವಕಾಶ ನೀಡಿದ್ದು ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅಡಿವೇಶ ಇಟಗಿ, ನಿಂಗಪ್ಪ, ಮೂಡಲಗಿ ತಾಲೂಕು ಹೋರಾಟ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
***********************************************
2017 ಹಾಗೂ 18 ನೇ ಸಾಲಿನಲ್ಲಿ ಮೂಡಲಗಿ ತಾಲೂಕು ಎಂದು ಸರ್ಕಾರ ಘೋಷಣೆ ಮಾಡಿದರು ಈವರೆಗೂ ಕಚೇರಿಗಳ ಸ್ಥಳಾಂತರವಾಗಿಲ್ಲ. ಜೊತೆಗೆ ಅರಭಾವಿ ಕ್ಷೇತ್ರದ ಜನರಿಗೆ ಅವುದೇ ಲಾಭ ಇಲ್ಲದಂತಾಗಿದೆ. ತಾಲೂಕು ಅಭಿವೃದ್ಧಿ ಕುಂಠಿತವಾಗಿದ್ದು ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.
ಲಕ್ಕಣ್ಣ ಸವಸುದ್ದಿ
ಕಾಂಗ್ರೆಸ್ ಮುಖಂಡರು ಅರಭಾವಿ
***********************************************