Select Page

Advertisement

ಪಂಚಭೂತಗಳಲ್ಲಿ ಯೋಧ ಪ್ರವೀಣ್ ಲೀನ ; ಕಣ್ಣೀರಿಟ್ಟ ಕಲ್ಲೋಳಿ ಜನ ….!

ಪಂಚಭೂತಗಳಲ್ಲಿ ಯೋಧ ಪ್ರವೀಣ್ ಲೀನ ; ಕಣ್ಣೀರಿಟ್ಟ ಕಲ್ಲೋಳಿ ಜನ ….!

ಮೂಡಲಗಿ : ಕಳೆದ ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಗುಂಡು ತಗುಲಿ ಮರಣ ಹೊಂದಿದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರವೀಣ ಸುಭಾಸ ಖಾನಗೌಡ್ರ (24) ಅವರ ಅಂತ್ಯಕ್ರಿಯೆ ಶುಕ್ರವಾರದಂದು ಸ್ವ-ಗ್ರಾಮದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.

ಭಾರತೀಯ ನೌಕಾಪಡೆಯಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್ ಬುಧವಾರ ಆಕಸ್ಮಿಕ ಗುಂಡು ತಗುಲಿ ಸಾವಣಪ್ಪಿದ್ದರು.‌ ಇಂದು ಮೃತ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಯಿತು.‌

ಯೋಧನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ಕುಂಟುಂಭದವರ ಆಕ್ರಂದನ ಮುಗಿಲು ‌ಮುಟ್ಟಿತ್ತು.‌ ಈ ಸಂದರ್ಭದಲ್ಲಿ ಪ್ರವೀಣ್ ತಂದೆ ಮಗನನ್ನು ನೆನೆದು ಬಿಕ್ಕಿ, ಬಿಕ್ಕಿ‌ ಕಣ್ಣೀರು ಹಾಕಿದ ದೃಶ್ಯ ಎಂತವರ ಮನ ಕಲಕುವಂತಿತ್ತು.

ಸೇನಾ ಕೇಂದ್ರ ವಾಹನದಲ್ಲಿ ತಾಲೂಕಿನ ಮಾಜಿ ಸೈನಿಕ ಸಂಘದವರಿಂದ ಬೈಕ್ ರ‍್ಯಾಲಿ ಮುಖಾಂತರ ಕಲ್ಲೋಳಿ ಪಟ್ಟಣಕ್ಕೆ ಆಗಮಿಸುತ್ತಿದಂತೆ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪವೃಷ್ಟಿ ಜೊತ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾವರ್ಜನಿಕರಿಗೆ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.‌

ಭಾರತೀಯ ನೌಕಾ ಪಡೆಯ ಕಮಾಂಡರ ಮಾಯಾಂಕ ಬಾಗೂರ, ಬೆಳಗಾವಿ ಮಹಾರ ರೆಜಿಮೆಂಟ್ ಸುಬೇದಾರ ಸುಭಾಸ ಗೂಡರ ಮೃತ ಯೋಧನ ಕುಟುಂಬದವರಿಗೆ ಭಾರತ ಧ್ವಜವನ್ನು ಹಸ್ತಾಂತರಿಸಿದರು.

Advertisement

Leave a reply

Your email address will not be published. Required fields are marked *

error: Content is protected !!