ಕುಡಿಯಬೇಡ ಎಂದಿದ್ದಕ್ಕೆ ಹೆಂಡತಿಯನ್ನೇ ಕೊಂದ ಪಾಪಿ ಗಂಡ ಏನಾದ…?
ಬೆಳಗಾವಿ : ಎಮ್ಮೆ ಮಾರಿದ್ದ ಹಣದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಗಂಡನನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೂಡಲಗಿ ತಾಲೂಕಿನ ಪುಲಗಡ್ಡಿ ಗ್ರಾಮದ ಯಲ್ಲವ್ವ ನಂದಿ(41) ಮೃತ ಮಹಿಳೆ. ಹೆಂಡತಿಯನ್ನು ಕೊಲೆಗೈದು ಪತಿ ಅಣ್ಣಪ್ಪ ನಂದಿ ತಾನೂ ಮನೆಯ ಹೊರಭಾಗದ ಕೋಣೆ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದಕ್ಕೂ ಮೊದಲೂ ಹೆಂಡತಿ ಮೇಲೆ ಮೃತ ಅಣ್ಣಪ್ಪ ಸಂಶಯ ಪಡುತ್ತಿದ್ದ ಎಂದು ಹೇಳಲಾಗುತ್ತಿದೆ. ಆದರೆ ಸೋಮವಾರ ಕುಡಿತದ ನೆಪದಲ್ಲಿ ನಡೆದ ಜಗಳದಲ್ಲಿ ಇಬ್ಬರೂ ದಂಪತಿಗಳು ದುರಂತ ಅಂತ್ಯ ಖಂಡಿದ್ದು ವಿಪರ್ಯಾಸ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


