ಲೋಕಸಭಾ ಚುನಾವಣಾ ತಾತ್ಕಾಲಿಕ ದಿನಾಂಕ ಪ್ರಕಟ
ನವದೆಹಲಿ : ಇನ್ನೇನು ದೇಶಾದ್ಯಂತ ಲೋಕಸಭಾ ಚುನಾವಣಾ ಜ್ವರ ಹೆಚ್ಚಾಗುತ್ತಿದ್ದು ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ನಡುವೆ ಕೇಂದ್ರ ಚುನಾವಣಾ ಆಯೋಗ ತಾತ್ಕಾಲಿಕ ದಿನಾಂಕ ಪ್ರಕಟ ಮಾಡಿದೆ.
ಚುನಾವಣಾ ಅಧಿಕಾರಿಗಳಿಗೆ ನೀಡಿರುವ ಪತ್ರದಲ್ಲಿ ಕೇಂದ್ರ ಚುನಾವಣಾ ಆಯೋಗ ತಾತ್ಕಾಲಿಕ ದಿನಾಂಕ ಪ್ರಕಟಿಸಿದೆ. ಇದರ ಪ್ರಕಾರ ಏಪ್ರಿಲ್ 16, 2024 ರನ್ನು ತಾತ್ಕಾಲಿಕ ದಿನವಾಗಿ ಘೋಷಿಸಿ ಈ ಕುರಿತು ಸುತ್ತೋಲೆ ಹೊರಡಿಸಿದೆ.
ಲೋಕಸಭಾ ಚುನಾವಣಾ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಭಾರತವು ಕೆಲವು ಹಂತಗಳಲ್ಲಿ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಮತ್ತು ಮೇ ತಿಂಗಳಲ್ಲಿ ಫಲಿತಾಂಶ ಬರಲಿದೆ ಎನ್ನಲಾಗಿದೆ. 2019 ರ ಚುನಾವಣೆಯು ಏಳು ಹಂತಗಳಲ್ಲಿ ನಡೆದಿತ್ತು. ಏಪ್ರಿಲ್ 11 ರಿಂದ ಪ್ರಾರಂಭವಾಗಿ ಮೇ 19 ಕ್ಕೆ ಕೊನೆಗೊಂಡಿತು, ಫಲಿತಾಂಶವು ಮೇ 23 ರಂದು ಪ್ರಕಟವಾಯಿತು.
ಮುಖ್ಯ ಚುನಾವಣಾ ಆಯುಕ್ತರ ವಿವರ : ಸುಶೀಲ್ ಚಂದ್ರ ಅವರು ಭಾರತದ 24 ನೇ ಮುಖ್ಯ ಚುನಾವಣಾ ಆಯುಕ್ತರು. ಇವರು ಏಪ್ರಿಲ್ 2021 ರಲ್ಲಿ ಅಧಿಕಾರ ವಹಿಸಿಕೊಂಡಿದ್ದು. ಇವರ ಮುಂಚೆ ಸುನಿಲ್ ಅರೋರಾ ಅವರು ಆಯುಕ್ತರಾಗಿದ್ದರು. ಇನ್ನೂ ಕರ್ನಾಟಕದ ಪ್ರಸ್ತುತ ರಾಜ್ಯ ಚುನಾವಣಾ ಆಯುಕ್ತರಾಗಿ ಮನೋಜ್ ಕುಮಾರ್ ಮೀನಾ ಅಧಿಕಾರದಲ್ಲಿದ್ದಾರೆ.


