ಸಚಿವೆ ಹೆಬ್ಬಾಳ್ಕರ್ ಮಾಧ್ಯಮ ಸಲಹೆಗಾರರಾಗಿ ಎಂ.ಕೆ ಹೆಗಡೆ ನೇಮಕ
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಶೇಷಾಧಿಕಾರಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ಎಂ.ಕೆ ಹೆಗಡೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ 28 ವರ್ಷಗಳಿಂದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ, ಸ್ಥಾನಿಕ ಸಂಪಾದಕರಾಗಿ ಎಂ.ಕೆ ಹೆಗಡೆ ಕಾರ್ಯ ನಿರ್ವಹಿಸಿದ್ದಾರೆ.
ಸಧ್ಯ ಇವರನ್ನು ಸಚಿವೆ ಹೆಬ್ಬಾಳ್ಕರ್ ಅವರ ವಿಶೇಷಾಧಿಕಾರಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಸರ್ಕಾರ ನೇಮಕ ಮಾಡಿದೆ.

