
ನಮಗೆ ಹಣ ಸಾಗಿಸುವ ಅವಶ್ಯಕತೆ ಇಲ್ಲ : ಚನ್ನರಾಜ ಹಟ್ಟಿಹೊಳಿ

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತವಾದ ನಂತರ ಸ್ಥಳ ಮಹಜರು ಮಾಡದೇ ಕಾರು ಸ್ಥಳಾಂತರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಸಂಕ್ರಾಂತಿ ಪೂಜೆ ಹಿನ್ನಲೆಯಲ್ಲಿ ಬೆಂಗಾವಲು ಪಡೆಗೆ ಮಾಹಿತಿ ನೀಡದೆ ಬೆಳಗಾವಿಗೆ ತೆರಳಿದ್ದೇವು. ಬೆಳಗಿನ ವೇಳೆ ಕಾರು ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ನಾವು ಅಪಘಾತ ಅಪಘಾತದಲ್ಲಿ ಇದ್ದೇವು. ಆಗ ಸಚಿವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ನಮ್ಮ ತಲೆಯಲ್ಲಿ ಇತ್ತು.
ನಾನೇ ಖುದ್ದು ಕಿತ್ತೂರು ಠಾಣೆ ಪಿಎಸ್ಐ ಅವರಿಗೆ ಕರೆ ಮಾಡಿ ಅಪಘಾತ ಮಾಹಿತಿ ನೀಡಿದ್ದೇ. ನಂತರ ಜನ ತಮ್ಮ ಬುದ್ದಿ ಬಳಸಿ ಕಾರು ಗ್ಯಾರೇಜ್ ಗೆ ಸ್ಥಳಾಂತರ ಮಾಡಿದ್ದಾರೆ. ತರಾತುರಿಯಲ್ಲಿ ಯಾವುದೂ ನಡೆದಿಲ್ಲ. ಈ ಕುರಿತು ಯಾವುದೇ ಗೊಂದಲ ಬೇಡ ಎಂದರು.
ಅಪಘಾತವಾದ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು ಎಂದು ಚಲವಾದಿ ನಾರಾಯಣಸ್ವಾಮಿ ಹೇಳುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರ. ಬಿಜೆಪಿ ತನ್ನ ಆಂತರಿಕ ಕಚ್ಚಾಟ ಮರೆಮಾಚಲು ಈ ರೀತಿಯ ಸುಳ್ಳು ಆರೋಪ ಮಾಡುತ್ತಿದೆ. ನಮಗೆ ಹಣ ಸಾಗಿಸುವ ಅವಶ್ಯಕತೆ ಇಲ್ಲ ಎಂದರು.