
ದರ್ಶನ್ ನನ್ನು ಬಂಧಿಸಿದ ಠಾಣೆಗೆ ಪರದೆ ಎಳೆದ ಪೊಲೀಸರು ; ಮೃತ ರೇಣುಕಸ್ವಾಮಿ ಸಾವಿನ ರಹಸ್ಯ ಬಯಲು

ಬೆಂಗಳೂರು : ಚಿತ್ರದುರ್ಗ ರೆಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪೊಲೀಸ್ ವಶಕ್ಕೆ ಸಿಲುಕಿರುವ ನಟ ದರ್ಶನ್ ಹಾಗೂ ಕೊಲೆ ಗ್ಯಾಂಗ್ ಕೂಡಿಟ್ಟ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಸಧ್ಯ ಪರದೆ ಎಳೆಯಲಾಗಿದೆ.
ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಚಲನವಲನ ಮಾಧ್ಯಮ ಹಾಗೂ ಸಾರ್ವಜನಿಕರಿಗೆ ತಿಳಿಯಬಾರದು ಎಂಬ ಉದ್ದೇಶದಿಂದ ಠಾಣೆಗೆ ಪರದೆ ಎಳೆಯುವ ಕೆಲಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಇನ್ನೂ ರೇಣುಕಾಸ್ವಾಮಿ ಸಾವಿನ ಕಾರಣ ತಿಳಿದುಬಂದಿದ್ದು, ಹೊಟ್ಟೆಯಲ್ಲಿ ಉಂಟಾದ ರಕ್ತಸ್ರಾವದ ಕಾರಣ ಅವನ ಮರನ ಆಗಿದೆ ಎಂದು ತಿಳಿದುಬಂದಿದೆ. ತಡರಾತ್ರಿ ದರ್ಶನ್ ಹಾಗೂ ಆತನ ಸಹಚರರು ಅಮಾನುಷವಾಗಿ ಹಲ್ಲೆ ಮಾಡಿದ್ದೇ ಇದಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೂ ದರ್ಶನ್ ಪ್ರಕರಣ ಖಂಡಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಒಬ್ಬ ಅಮಾಯಕ ಯುವಕನ ಸಾವಿಗೆ ಕಾರಣವಾದ ನಟ ದರ್ಶನ್ ಹಾಗೂ ಎಲ್ಲಾ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
Annapurneswari police station, Actor Darshan, Pavitra gowda, Chitradurga, Renukaswamy,