Select Page

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪ್ರಕರಣ ದಾಖಲಿಸಲು ಕಮಲ ಪಡೆ ತಯಾರಿ

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪ್ರಕರಣ ದಾಖಲಿಸಲು ಕಮಲ ಪಡೆ ತಯಾರಿ

ಬೆಳಗಾವಿ : ಮತದಾರರಿಗೆ ಮಿಕ್ಸರ್ ಸೇರಿದಂತೆ ದಿನಬಳಕೆ ವಸ್ತು ಹಂಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಹೊರಟ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸುವ ಸುಳಿವನ್ನು ಬಿಜೆಪಿ ಮುಖಂಡ ಎನ್ ರವಿಕುಮಾರ್ ನೀಡಿದ್ದಾರೆ.

ಜಾರಕಿಹೊಳಿ ಅವರ ಮೇಲೆ‌ ಕಾಂಗ್ರೆಸ್ ದೂರು ನೀಡಿದೆ. ರಮೇಶ ಅವರು ಆರು ಸಾವಿರ ರೂ. ಎಲ್ಲಿ ಕೊಟ್ಟಿದ್ದಾರೆ ಎನ್ನುವುದನ್ನು ಬಿಡುಗಡೆ ಮಾಡಲಿ. ನಾವು ಮತದಾರರನ್ನು ಎಲ್ಲಿ ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದರ ಬಗ್ಗೆ ನಾವು ಸಹ ದೂರು ನೀಡುತ್ತಿದ್ದೇವೆ. ಮತದಾರರಿಗೆ ಕುಕ್ಕರ್, ಮಿಕ್ಸರ್ ಹಂಚಿಕೆ ಮಾಡಿ ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ‌‌ ಹೆಬ್ಬಾಳ್ಕರ್ ಹೆಸರು ಹೇಳದೆ ಅವರ ವಿರುದ್ಧ ‌ದೂರು‌ ನೀಡುವ ಸುಳಿವು ‌ನೀಡಿದರು.

ರಮೇಶ ಜಾರಕಿಹೊಳಿ‌ ಅವರು ಮತದಾರರಿಹೆ ಹಣ ಕೊಟ್ಟಿರುವ ವಿಡಿಯೋ ಬಿಡುಗಡೆ ಮಾಡಲಿ. ನಾವು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಯಾವ ರೀತಿ ಕುಕ್ಕರ್, ಮಿಕ್ಸರ್ ಹಂಚಿದ್ದಾರೆ ಎನ್ನುವ ವಿಡಿಯೋ ಬಿಡುಗಡೆ ಮಾಡಿದರು. ನಾವು ಸುಮ್ಮನೆ ಕುಳಿತಿಲ್ಲ. ಕಾಂಗ್ರೆಸ್ ‌ಮಾಡಿರುವ ಭ್ರಷ್ಟಾಚಾರದ ಬಗ್ಗೆ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಎಂದರು.

ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭಗವಂತನೇ ನಗಬಹುದು ಎಂಥ ಸ್ವಚ್ಚ ಮನುಷ್ಯ ಎಂದು. ಅವರು ಯಾಕೆ‌ ಜೈಲಿಗೆ ಹೋಗಿರುವುದು ಗೊತ್ತಿದ್ದರೂ ಕೂಡ ಮುಚ್ಚಿಟ್ಟುಕೊಂಡು ಬಿಜೆಪಿ‌ ವಿರುದ್ಧ ಬಹಳ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯನವರು ೩೫ ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಯಲು ಆಶ್ರಯದಾತ ಎಂದು ಹರಿಹಾಯ್ದರು.

************************

ನನ್ನ ಸುದ್ದಿಗೆ ಬಂದರೆ ಆತನ ವೈಯಕ್ತಿಕ ವಿಚಾರ ಬಿಚ್ಚಿಡುವೆ – ಮತ್ತೊಮ್ಮೆ ಗುಡುಗಿದ ಸಾಹುಕಾರ

ಬೆಳಗಾವಿ : ಈಗಾಗಲೇ ಡಿ.ಕೆ ಶಿವಕುಮಾರ್ ನನ್ನ ವಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಇನ್ಮುಂದೆ ನನ್ನ ವಿಷಯ ಕುರಿತಾಗಿ ಮಾತಮಾಡಿದರೆ ಅವರ ವೈಯಕ್ತಿಕ ವಿಚಾರ ಕುರಿತು ಮಾತನಾಡಬೇಕಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಇದನ್ನು ಗಟ್ಟಿಯಾಗಿ ಎದುರಿಸಿ ಹೊರಗೆ ಬಂದಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮಾತಾಡಿದ್ದು, ನನ್ನ ಸಿಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ‌.
ಸಿಡಿಯಲ್ಲಿ ಮಹಾನಾಯಕನ ಕೈವಾಡ ಇರುವುದಕ್ಕೆ ಸಾಕ್ಷಿ ಇದ್ದು. ನಲವತ್ತು ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಅನ್ನೋ ಸಾಕ್ಷಿ ಇದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಸಿಡಿ ಕೇಸ್ ಸಿಬಿಐಗೆ ಒಪ್ಪಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ. ಸಿಡಿ ಕೇಸ್ ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ, ಆತನ ಮನೆಯಲ್ಲಿ ಸುಮಾರು ಸಿಡಿಗಳು ಹಲವು ನಸಯಕರದ್ದು ಸಿಕ್ಕಿವೆ. ಈ ಕೆಲಸ ಮಹಾನ್ ನಾಯಕನ ಕುತಂತ್ರದಿಂದ ಆಗಿದೆ.
ಸಿಬಿಐ ವಿಚಾರಣೆ ನಡೆದರೆ ಎಲ್ಲವೂ ಹೊರಗೆ ಬರುತ್ತೆ ಎಂದರು.

ಗುತ್ತಿಗೆದಾರ ಸಂತೋಷ ಪಾಟೀಲ್ ಕೇಸ್ ಕೂಡ ಸಿಬಿಐಗೆ ಕೊಡಬೇಕು.ಸಂತೋಷ ಪಾಟೀಲ್ ಹಗರಣದಲ್ಲಿ ಯಾರಿದ್ದಾರೆ ಅನ್ನೋದು ಹೊರಗೆ ಬರಬೇಕು ಸಂತೋಷ್ ಪಾಟೀಲ್ ಉಡುಪಿಗೆ ಬರುವ ಮುನ್ನ ಚಿಕ್ಕಮಗಳೂರು ಹೋಗಿದ್ದ. ಒಂದೇ ರೂಮ್ ನಲ್ಲಿ ಅಂದು ಎಲ್ಲರೂ ಇದ್ದರು.ಉಡುಪಿಗೆ ಬಂದ ಬಳಿಕ ಎರಡು ರೂಮ್ ಯಾಕೆ ಮಾಡಿದರು ?  ಬಹಳ ಮುಖ್ಯವಾದ ಅಂಶ ಇದೆ ಸಿಬಿಐಗೆ ಕೊಟ್ಟರೆ ಎಲ್ಲವೂ ಹೊರಗೆ ಬರುತ್ತೆ. ನಮ್ಮ ಸರಕಾರಕ್ಕೆ ಮುಜುಗರ ಆಗಬಾರದು ಎಂದು ಸುಮ್ಮನೆ ಕುಳಿತಿದ್ದೇವೆ.ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಮಹಾನಾಯಕನ ಇರಬಹುದು. ಇದನ್ನು ಸಿಬಿಐಗೆ ಕೊಡುವಂತೆ ಈಗಾಗಲೇ ಸಿಎಂ ಹಾಗೂ ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೇನೆ ಎಂದರು.

********

ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿ ಟಾರ್ಗೆಟ್  :

ಡಿಕೆಶಿಗೆ ನನ್ನ ಒಬ್ಬನದ್ದೇ ಹೆದರಿಕೆ ಇದೆ‌, ಅವನನ್ನ ಮುಗಿಸುತ್ತೇನೆ ಅಂತಾ ಹೆದರಿಕೆ ಇದೆ. ನಾನೊಬ್ಬನೇ ಅವನನ್ನ ಎದುರಿಸುವವ, ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ ಎಂದರು. ಸ್ಥಳೀಯ ನಾಯಕರ ಪಾತ್ರ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ,
ಅವರು ಏಜೆಂಟ್‌ರು ನಾನು ಅವರ ಬಗ್ಗೆ ಮಾತನಾಡವುದರಲ್ಲಿ ಅರ್ಥ ಇಲ್ಲ. ಎನಿದ್ದರೂ ಡಿಕೆಶಿ ಆ್ಯಂಡ್ ಕಂಪನಿ ನೋಡೋಣ. ನನ್ನ ಕೇಸ್ ಬಿಡುವುದಿಲ್ಲ ಸಿಬಿಐಗೆ ಕೊಡಿಸುತ್ತೇನೆ ಎಂದು ಪುನರಚ್ಚರಿಸಿದರು.

********

ಕಾಂಗ್ರೆಸ್‌ನಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ –

ನಾನು ಆರನೇ ಅವಧಿ ಶಾಸಕ ನನಗೆ ಕಾನೂನು ಅರಿವು ಇದೆ.‌‌ ಯಾವ ಅಭ್ಯರ್ಥಿ ಪರವಾಗಿ ನಾನು ಹೇಳಿಲ್ಲ. ಕಾರ್ಯಕ್ರಮದಲ್ಲಿ ಎನೂ ಮಾತಾಡಿದೀನಿ ಗೊತ್ತಿಲ್ಲ.
ಗ್ರಾಮೀಣ ಶಾಸಕರು ಸಾರ್ವಜನಿಕವಾಗಿ ಜನರಿಗೆ ದಿನಬಳಕೆ ವಸ್ತು ಹಂಚುತ್ತಿದ್ದಾರೆ ಅದು ಆಮಿಷ ಅಲ್ವಾ?.
ಕಾಂಗ್ರೆಸ್ ಈ ಮಟ್ಟಿನ ಸಣ್ಣ ರಾಜಕಾರಣ ಮಾಡಬಾರದು.
ಈಗಿನ ಬೆಳಗಾವಿ ಗ್ರಾಮೀಣ ಶಾಸಕರು ತಮ್ಮ ಅಧಿಕಾರದ ಸಂದರ್ಭದಲ್ಲಿ ಬೆಂಗಳೂರು, ದೆಹಲಿ ಓಡಾಟದಲ್ಲಿ ಜನರನ್ನ ಮರೆತರು. ಆರು ಸಾವಿರದಿಂದ ಹತ್ತು ಸಾವಿರ ಕೋಟಿ ಖರ್ಚು ಆಗಲಿ ಅಂತಾ ಬೇರೆ ಉದ್ದೇಶಕ್ಕೆ ಹೇಳಿದ್ದೇನೆ. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಕೊಡುವುದಾಗಿ ಹೇಳಿದ್ದೇನೆ. ಅವರು ಉಚಿತ ಕರೆಂಟ್ ಕೊಡುತ್ತೇನೆ ಅಂದು ಹೇಳಿರುವೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

Advertisement

Leave a reply

Your email address will not be published. Required fields are marked *

error: Content is protected !!