Select Page

Advertisement

ಸವದಿ ವಿರುದ್ಧ ಕುಮಠಳ್ಳಿ ಅಖಾಡಕ್ಕೆ : ಮತ್ತೊಮ್ಮೆ ತೊಡೆತಟ್ಟಿದ ಗೋಕಾಕ್ ಸಾಹುಕಾರ್

ಸವದಿ ವಿರುದ್ಧ ಕುಮಠಳ್ಳಿ ಅಖಾಡಕ್ಕೆ : ಮತ್ತೊಮ್ಮೆ ತೊಡೆತಟ್ಟಿದ ಗೋಕಾಕ್ ಸಾಹುಕಾರ್

ಬೆಳಗಾವಿ : ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿಯಿಂದ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಕಾಗವಾಡದಿಂದ ಮಾಜಿ ಸಚಿವ ಶ್ರೀಮಂತ ಪಾಟೀಲ್ ‌ಪುತ್ರ ಶ್ರೀನಿವಾಸ ಪಾಟೀಲ್ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಅಥಣಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಇವರು. ಜಾರಕಿಹೊಳಿ ಕುಟುಂಬ ಲಿಂಗಾಯತ ವಿರೋಧಿಗಳು ಎಂದು ಹೇಳುತ್ತಾರೆ. ನಮ್ಮ ಮನೆತನದಿಂದ ಯಾರೂ ಅಧ್ಯಕ್ಷರಾಗುವುದಿಲ್ಲ. ಲಿಂಗಾಯತ ಸಮುದಾಯದವರೇ ಅಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ. ಅಥಣಿಯಲ್ಲಿ ಲಕ್ಷ್ಮಣ ‌ಸವದಿಗೆ ಬುದ್ದಿ ಕಲಿಸಲು ಮಹೇಶ್ ಕುಮಠಳ್ಳಿ ಅವರೇ ಅಭ್ಯರ್ಥಿ ಆಗಲಿದ್ದಾರೆ ಎಂದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಅನ್ಯಾಯ ಮಾಡಿ ಕಾಂಗ್ರೆಸ್ ಸೇರಿದ್ದಾರೆ. ನನಗೆ 2023 ಎಲ್ಲಿ ಕಾಂಗ್ರೆಸ್ ಆಹ್ವಾನ ನೀಡಿತ್ತು. ಮರಳಿ ಹೋಗಿದ್ದರೆ ಇಂದು ನಾನು ಮಂತ್ರಿಯಾಗಿರುತ್ತಿದೆ. ಆದರೆ ನಾನು ಪಕ್ಷಕ್ಕೆ ದ್ರೋಹ ಎಸಗಿಲ್ಲ. ಲಕ್ಷ್ಮಣ ಸವದಿ ಜೊತೆ ಯಾವತ್ತೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ರಮೇಶ್ ಕಾರಕಿಹೊಳಿ ಕಿಡಿಕಾರಿದರು.

ಲಕ್ಷ್ಮಣ್ ಸವದಿ ಒರ್ವ ನಾಟಗಕಕಾರ, ಕಳೆದ 2018 ರಲ್ಲಿಯ ಅಥಣಿ ಜನರು ರಾಕ್ಷಸನನ್ನು ಸೋಲಿಸಿದರು ಅವನ್ನು ಯಾರೂ ಡಿಸಿಎಂ ಮಾಡಿದರು ಗೊತಿಲ್ಲ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಶಾಸಕ ಸವದಿ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೈತರ ಅಭಿವೃದ್ಧಿಗಾಗಿ ನಿಪಕ್ಷಪಾತವಾಗಿ ಮಾಡೋಣಾ ಎಂದು ಹೇಳುತ್ತಾರೆ ಆದರೆ ಅಥಣಿಯಲ್ಲಿ ತಮಗೆ ಬೇಕಾದವರಿಗೆ ಮಾತ್ರ ಸಾಲದ ಪಥ್ಥು ನೀಡುತ್ತಾರೆ ಮತ್ತೆ ಇದು ರಾಜಕೀಯ ಅಲ್ವಾ , ಬಿಜೆಪಿ ಬೆಂಬಲಿಗ ಪ್ರಾಥಮಿಕ ಕೃಷಿ ಪತ್ತಿಗೆ ಯಾವುದೆ ಸಾಲದ ಸೌಲಭ್ಯ ನಿಡಿಲ್ಲಾ ಅದರಲ್ಲಿ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು .

2019 ರಲ್ಲಿ ರಮೇಶ ಕತ್ತಿ ಹಾಗೂ ಉಮೇಶ ಕತ್ತಿ ಅವರು ನನಗೆ ಡಿಸಿಸಿ ಬ್ಯಾಂಕ ಚುನವಣೆಗೆ ನಿಲ್ಲಿ ಎಂದು ಒತ್ತಡ ಹಾಕಿದರು ನಂತರ ಅಥಣಿಗೆ ಬಂದು ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಹೊಂದಾಣಿಕೆಯಾದರು , ಈಗ ನಾನು ಚುನಾವಣೆಯ ಎದುರಿಸಲು ಸಿದ್ದವಾಗಿದ್ದೇನೆ , ಫಲಿತಾಂಶ ಏನೆ ಬರಲಿ ಸ್ಪರ್ಧೆ ಖಚಿತ ಎಂದು ಹೇಳಿದರು .

ಮಾಜಿ ಸಚಿವ ಶ್ರೀಮಂತ ಪಾಟೀಲ ಮುಖಂಡ ಸಿದ್ದಪ್ಪ ಮುದಕ್ಕಣ್ಣವರ ಮಾತನಾಡಿದರು . ಈ ವೇಳೆ ಬಿಜೆಪಿ ಅದ್ಯಕ್ಷರಾದ ಡಾ.ರವಿ ಸಂಕ , ಉಪಾದ್ಯಕ್ಷರಾದ ಸಿದ್ದು ಪಾಟೀಲ, ಮಲ್ಲಪ್ಪಾ ಹಂಚಿನಾಳ , ಜಿಲ್ಲಾ ರೈತ ಮೋರ್ಚಾ ಉಪಾದ್ಯಕ್ಷ ಅಣ್ಣಪ್ಪಾ ಹಳ್ಳೂರ.

ಮುಖಂಡರಾದ ಧರೇಪ್ಪಾ ಠಕ್ಕಣ್ಣವರ, ಅಪ್ಪಾಸಬ ಅವತಾಡೆ , ಪ್ರಭಾಕರ ಚೌಹ್ವಾನ , ರವಿ ಪೂಜಾರಿ, ಮುರಘೇಶ ಕುಮಠಳ್ಳಿ , ಅಶೋಕ ಯಲಡಗಿ,ನಾನಾಸಾಬ ಅವತಾಡೆ ,ಆರ.ಎಲ್.ಪಾಟೀಲ, ಮಲ್ಲಿಕಾರ್ಜುನ ಅಂದಾನಿ‌ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು .

Advertisement

Leave a reply

Your email address will not be published. Required fields are marked *

error: Content is protected !!