ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಎ ದಿಲೀಪ್ ಕುಮಾರ್ ಭರ್ಜರಿ ಗಿಫ್ಟ್ ವಿತರಣೆ
ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಭಾಗದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿಯೇ ನಡೆದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಖಾನಾಪುರ ಕ್ಷೇತ್ರದಲ್ಲಿ ಈಗಿನಿಂದಲೇ ಚುನಾವಣೆ ತಯಾರಿ ಭರ್ಜರಿ ಶುರುವಾಗಿದೆ. ಅರಿಶಿನ ಕುಂಕುಮ ಹೆಸರಲ್ಲಿ ಕೆಲವು ಗಿಫ್ಟ್ ವಿತರಣೆ ಜೊತೆಗೆ ಮಿಕ್ಸರ್ ಅಡುಗೆ ಪಾತ್ರೆ ಹಂಚಿಂದ್ರೆ ಇತ್ತ ಖಾನಾಪುರ ಕ್ಷೇತ್ರದಲ್ಲಿ ಗಡಿಯಾರ ಮತ್ತು ಸೀರೆ ಹಂಚಿಕೆ ಕಾರ್ಯ ಜೋರಾಗಿಯೇ ನಡೆದಿದೆ.
ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗಾಗಿ ಈಗಾಗಲೇ ಹಲವು ಆಕಾಂಕ್ಷಿಗಳು ಪೈಪೋಟಿ ನಡುವೆ ಎ ದಿಲೀಪ್ ಕುಮಾರ್ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಗಳ ಮೂಲಕ ಜನರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ. ಈ ಕ್ಷೇತ್ರದಿಂದ ಎ ದಿಲೀಪ್ ಕುಮಾರ್ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು ಈಗಾಗಲೇ ಸುಮಾರು ಕಳೆದೆರೆಡು ವರ್ಷಗಳಿಂದ ಕ್ಷೇತ್ರದಲ್ಲಿ ಟಿಕಾಣಿ ಹೂಡಿ ಸಾಕಷ್ಟು ಅಭಿವೃಧ್ದಿ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಇನ್ನೊಂದೆಡೆ ಚುನಾವಣೆ ತಯಾರಿಗಾಗಿ ಹಲವು ತಿಂಗಳಿಂದ ಅರಿಶಿನ ಕುಂಕುಮ ಕಾರ್ಯಕ್ರಮ, ಮ್ಯಾರಥಾನ್, ಎತ್ತಿನ ಬಂಡಿ ಸ್ಪರ್ಧೆ, ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಆರ್ಥಿಕ ಸಹಾಯ ಮಾಡುವ ಜೊತೆಗೆ ಈಗ ಕ್ಷೇತ್ರದ ಜನರಿಗಾಗಿ ಮನೆ ಮನೆಗೆ ತೆರಳಿ ಗಡಿಯಾರ ಜೊತೆಗೆ ಮಹಿಳೆಯರಿಗೆ ಸೀರೆ ಹಂಚುವ ಕಾರ್ಯಕ್ರಮ ಜೋರಾಗಿಯೇ ಮಾಡುತ್ತಿದ್ದಾರೆ.
ಖಾನಾಪುರ ಕ್ಷೇತ್ರದ ಜನರ ನಾಡಿಮಿಡಿತ ಅರಿತ ಎ ದಿಲೀಪ್ ಕುಮಾರ್ ಈ ಕ್ಷೇತ್ರದ ಅಭಿವೃದ್ಧಿಗಾಗಿ ಈಗಿನಿಂದಲೇ ಪಣ ತೊಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜನರ ಸೇವೆ ಮಾಡುವ ಇಂಗಿತವನ್ನು ಕೂಡ ಹೊರಹಾಕಿದ್ದಾರೆ. ಕ್ಷೇತ್ರದ ಜನರು ಎ ದಿಲೀಪ್ ಕುಮಾರ್ ಮೇಲೆ ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ ಇದೆಲ್ಲವನ್ನೂ ನೋಡಿದ್ರೆ ಬಿಜೆಪಿ ಟಿಕೇಟ್ ಸಿಕ್ಕಿದ್ದೇ ಆದ್ರೆ ಗೆಲವು ಇವರ ಪಾಲಾಗಲಿದೆ ಎಂದು ಕ್ಷೇತ್ರದ ಜನರ ಇಂಗಿತ.