ಈಗ ಮೋದಿ ಬಗ್ಗೆ ನನಗೆ ಯಾವ ಗೌರವವೂ ಇಲ್ಲ : ಲಕ್ಷ್ಮಣ ಸವದಿ ವ್ಯಂಗ್ಯ
ಬೆಂಗಳೂರು : ನಾನು ಹಿಂದೆ ಆ ಪಕ್ಷದಲ್ಲಿ ಇದ್ದೆ. ಆಗ ಮೋದಿ ಬಗ್ಗೆ ಅಭಿಮಾನ ಹೊಂದಿದ್ದೆ, ಆದರೆ ಈಗ ಕಾಂಗ್ರೆಸ್ ನಲ್ಲಿ ಇರುವುದರಿಂದ ಇಲ್ಲಿನ ವ್ಯವಸ್ಥೆ ಬಗ್ಗೆ ನಂಬಿಕೆ ಹೊಂದಿದ್ದು ಪ್ರಧಾನಿ ನರೇಂದ್ರ ಮೋದಿ ಕುರಿತು ಯಾವುದೇ ಗೌರವ ಇಲ್ಲ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡಿರುವ ಇವರು ಮೋದಿ ಕುರಿತು ಅನೇಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಲ್ಲಿನ ಅಭಿವೃದ್ಧಿ ಕೆಲಸ ನೋಡಿ ಜನರು ಪ್ರಧಾನಿ ಹುದ್ದೆಗೆ ಕೂಡಿಸಿದ್ದರು. ಆದರೆ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದರು.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಇದ್ದ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿದ್ದವು. ಆದರ ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ.
ನಾವು ಬದಲಾವಣೆ ನಿರೀಕ್ಷೆ ಹೊಂದಿದ್ದೇವು ಆದರು ಅದು ಸಾಧ್ಯವಾಗಿಲ್ಲ ಎಂದರು.


