Select Page

Advertisement

ಉನ್ನತ ಹುದ್ದೆ ನೀಡುವ ಕುರಿತು ಯಾವುದೇ ಚರ್ಚೆಯಾಗಿಲ್ಲ, ಎಲ್ಲವೂ ಊಹಾಪೋಹ – ಲಕ್ಷ್ಮಣ ಸವದಿ

ಉನ್ನತ ಹುದ್ದೆ ನೀಡುವ ಕುರಿತು ಯಾವುದೇ ಚರ್ಚೆಯಾಗಿಲ್ಲ, ಎಲ್ಲವೂ ಊಹಾಪೋಹ – ಲಕ್ಷ್ಮಣ ಸವದಿ

ಚಿಕ್ಕೋಡಿ : ನನಗೆ ಕೆಪಿಸಿಸಿ ಕಾರ್ಯದಕ್ಷ ಸ್ಥಾನವನ್ನು ಕೊಡುವ ಕುರಿತು ಮಾಧ್ಯಮಗಳಲ್ಲಿ ನಾನು ನೋಡಿದೆ, ಈ ಸ್ಥಾನಮಾನ ಊಹಾಪೋಹ ಅಷ್ಟೇ, ನನ್ನ ಜೊತೆ ಸಿಎಂ ಹಾಗೂ ಡಿಸಿಎಂ ಯಾರು ಮಾತುಕತೆ ನಡೆಸಿಲ್ಲ ಮಾದ್ಯಮದಲ್ಲಿ ಮಾತ್ರ ಈ ಚರ್ಚೆ ನಡೆಯುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಶುಕ್ರವಾರ ಅಥಣಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಮಾದ್ಯಮದಲ್ಲಿ ಪದಾಕಾರಿಗಳ ಬೇರೆ ಬೇರೆ ಹುದ್ದೆ ಚರ್ಚೆ ನಡೆಯುತ್ತಿದೆ ಪದಾಕಾರಿಗಳ ಪುನರಚನೆ ಮಾಡುವಂತದ್ದು ಕೇಂದ್ರದ ಹಾಗೂ ರಾಜ್ಯ ಅಧ್ಯಕ್ಷ ನೇತೃತ್ವದಲ್ಲಿ ನಡೆಯುತ್ತದೆ ಇವತ್ತಿನವರೆಗೆ ಕೆಪಿಸಿಸಿ ಕಾರ್ಯಧ್ಯಕ್ಷರ ಸ್ಥಾನದ ಬಗ್ಗೆ ನನ್ನ ಎದುರಿಗೆ ಯಾರು ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅವರು ಹುಕ್ಕೇರಿ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದರು ಅವರು ಬೆಳಗಾವಿಗೆ ಬರುವುದು ಶಾಸಕರಿಗೆ ಮತ್ತು ಮಂತ್ರಿಗಳಿಗೆ ಮಾಹಿತಿ ನೀಡಲಿಲ್ಲ ಇದರಿಂದ ಕೆಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರು ನಾನು ಕೂಡ ಬೆಂಗಳೂರಿನಲ್ಲಿ ಬೇರೆ ಕೆಲಸದ ನಿಮಿತ್ತ ಅಲ್ಲೇ ಉಳಿದಿದ್ದೆ.

ಡಿಕೆಶಿ ಭಾಗವಹಿಸಿದ್ದು ಸರ್ಕಾರಿ ಕಾರ್ಯಕ್ರಮವಲ್ಲ ಈ ವಿಚಾರವನ್ನು ಅಪಾರ್ಥ ಮಾಡಿಕೊಳ್ಳಬಾರದು, ಹುಕ್ಕೇರಿ ಶ್ರೀಗಳು ದಸರಾ ಹಬ್ಬಕ್ಕೆ ಅವರನ್ನು ಆಗಮಿಸಿದರು ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ಥಾನವನ್ನು ವಹಿಸಿದ್ದರು ಇಲ್ಲಿ ಡಿಕೆಶಿ ಸ್ವಾಗತಕ್ಕೆ ಅವರು ಹೋಗಿಲ್ಲ ಇವರು ಹೊಗಿಲ್ಲ ಎಂಬುವುದು ಚರ್ಚೆ ಅನಾವಶ್ಯಕ ಎಂದು ತಿಳಿಸಿದರು.

ಈಶ್ವರಪ್ಪನವರು ಹಿಂತ ಹೇಳಿಕೆ ನೀಡುವುದು ಹೊಸದಲ್ಲ ಮೊದಲಿನಿಂದಲೂ ಈ ರೀತಿ ಹೆಳುತ್ತಾ ಇರುತ್ತಾರೆ ಈ ರೀತಿ ಹೇಳಿ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ ಈ ಸರ್ಕಾರ ಐದು ವರ್ಷ ಸುಭದ್ರವಾಗಿ ಇರುತ್ತದೆ ಐದು ವರ್ಷ ಸರ್ಕಾರ ಏನು ಆಗುವುದಿಲ್ಲ.

ಐದು ಪ್ಲಸ್ ಐದು ವರ್ಷಕಾಲ ಸರ್ಕಾರ ಗಟ್ಟಿಯಾಗಿ ಇರುತ್ತದೆ, ಇನ್ನು ಹತ್ತು ವರ್ಷಗಳ ಕಾಲ ಬಿಜೆಪಿ ಪಕ್ಷ ಭದ್ರವಾಗಿ ವಿರೋಧ ಪಕ್ಷದಲ್ಲಿರುತ್ತದೆ ಎಂದು ಭವಿಷ್ಯ ನುಡಿದರು.

ಬೆಳಗಾವಿ ರಾಜಕಾರಣ ವರಿಷ್ಠರಿಗೆ ತಲೆನೋವು ವಿಚಾರ:
ಏನು ತಲೆನೋವು ಇಲ್ಲ, ಮೈ ನೋವು ಇಲ್ಲ.
ಯಾವುದು ಇಲ್ಲ ಏನ್ ಸಂಬಂಧವು ಇಲ್ಲ.
ಸುಮ್ಮನೆ ಅವು ಸೃಷ್ಟಿಯಾಗಿದೆ. ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.

ನಾವು ಎಲ್ಲರೂ ಒಂದಾಗಿದ್ದೇವೆ, ಒಟ್ಟಾಗಿ ಇರುತ್ತೇವೆ.
ಒಳ್ಳೆಯ ಕೆಲಸಗಳನ್ನು ಮಾಡೋದಕ್ಕೆ ಚಿಂತನೆ ಮಾಡಿದ್ದೇವೆ ಒಟ್ಟಾಗಿ ನಾವು ಕೆಲಸಗಳನ್ನು ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

Advertisement

Leave a reply

Your email address will not be published. Required fields are marked *

error: Content is protected !!