ಜಾರಕಿಹೊಳಿ ಚಿಲ್ಲರೆ ಮಾತಿಗೆ ಬೆಲೆ ಕೊಡಲ್ಲ ; ಲಕ್ಷ್ಮಣ ಸವದಿ ವ್ಯಂಗ್ಯ
ಅಥಣಿ : ಹೊರಗಿನಿಂದ ಬಂದು ನನ್ನ ಕ್ಷೇತ್ರದಲ್ಲಿ ಚಿಲ್ಲರೆ ಮಾತು ಆಡುವವರ ಕುರಿತು ನಾನು ಮಾತನಾಡುವುದಿಲ್ಲ ಇಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ Ramesh Jarakiholi ವಿರುದ್ಧ ಮಾಜಿ ಡಿಸಿಎಂ ಲಕ್ಷ್ಮಣ ಸವದಿ Laxman Savadi ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ಅಥಣಿ ಪಟ್ಟಣದಲ್ಲಿ ಮಾತನಾಡಿದ ಇವರು.
ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿರುವ ಕಾರ್ಯಕರ್ತರಿಗೆ ತೊಂದರೆ ಕೊಡಲಾಗುತ್ತದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ.
ತಾಲೂಕಿನ ಅಧಿಕಾರಿಗಳು ಅಂಬೇಡ್ಕರ್ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಈ ರೀತಿ ಅವಮಾನಿಸುವದು ಸರಿಯಲ್ಲ. ಯಾರ ಕೈಗೊಂಬೆಯಾಗಿ ಯಾರು ಕೆಲಸ ಮಾಡಬೇಕಿಲ್ಲ ಇಂತಹ ಕ್ಷುಲ್ಲಕ ಮಾತಗಳಿಗೆ ಗಮನ ಕೊಡುವದಿಲ್ಲ ಎಂದರು.


